ಅಂತರಾಷ್ಟ್ರೀಯ

ನಾಳೆಯಿಂದ ಪ್ರಧಾನಿ ನರೇಂದ್ರ ಮೋದಿ ಮೂರು ದಿನಗಳ ಬ್ರಿಟನ್ ಪ್ರವಾಸ

Pinterest LinkedIn Tumblr

Australian Prime Minister Tony Abbott with Indian prime minister Narendra Modi upon his arrival  for his welcoming ceremony

ಲಂಡನ್, ನ.10: ಬಿಹಾರ ವಿಧಾನಸಭಾ ಚುನಾವಣೆ ಸುದ್ದಿ ಬರೀ ಭಾರತದಲ್ಲಷ್ಟೇ ಅಲ್ಲದೆ, ಬ್ರಿಟನ್ನಿನಲ್ಲೂ ಇಂದು(ಮಂಗಳವಾರ) ಮುದ್ರಣ ಮಾಧ್ಯಮದ ಮುಖಪುಟದಲ್ಲಿ ರಾರಾಜಿಸಿದೆ.

ಪ್ರಧಾನಿ ನರೇಂದ್ರ ಮೋದಿಯವರು ಮೂರು ದಿನಗಳ ಭೇಟಿಗಾಗಿ ಬಹುತೇಕ ಬುಧವಾರ ಆಗಮಿಸಲಿದ್ದು, ಬಿಹಾರ ವಿಧಾನಸಭೆ ಚುನಾವಣೆಯ ಸೋಲು ಹಾಗೂ ಸ್ವತಃ ತವರಲ್ಲೇ ತಲೆದೋರಿರುವ ಕಿರಕಿರಿಯೊಂದಿಗೆ ಅವರ ಈ ಮೊದಲ ಬ್ರಿಟನ್ ಭೇಟಿ ನಡೆಯಲಿದೆ ಎಂದು ಬ್ರಿಟನ್ ಮಾಧ್ಯಮಗಳು ಮೊದಲಪುಟದಲ್ಲಿ ಪ್ರಕಟವಾಗಿವೆ. ಬ್ರಿಟನ್ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಧಾನಿ ಮೋದಿಅವರಿಗೆ ಬೃಹತ್ ಸ್ವಾಗತ ಕಾರ್ಯಕ್ರಮ ಆಯೋಜಿಸಲಾಗಿದೆ. ಸುಮಾರು 80 ಸಾವಿರ ಜನ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ರಾಣಿ ಎಲಿಜಬೆತ್ ಅವರೊಂದಿಗೆ ಮೋದಿ ಲಂಚ್ ಕೂಡ ಏರ್ಪಾಡಾಗಿದೆ. ಸ್ವಾಗತ ಕಾರ್ಯಕ್ರಮ ಇಲ್ಲಿನ ವೆಂಬ್ಲ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯಲಿದ್ದು, ಪ್ರಧಾನಿ ಡೆವಿಡ್ ಕಮರೋನ್ ಭಾಗವಹಿಸುತ್ತಾರೆ. ನರೇಂದ್ರ ಮೋದಿಯವರ ಭೇಟಿಯನ್ನು ಕಮೆರೋನ್ ಕಾತರದಿಂದ ಕಾಯುತ್ತಿದ್ದಾರೆ. ಇಷ್ಟೆಲ್ಲಾ ಆದರೂ ಪ್ರಧಾನಿ ಮೋದಿಯವರ ಈ ಭೇಟಿಯನ್ನು ಬಿಹಾರದ ಚುನಾವಣಾ ವೈಫಲ್ಯ ಮಸಕು ಮಾಡಲಿದೆ. ಮೋದಿಯವರಿಗೂ ಇದು ಇರಿಸು-ಮುರುಸು ಉಂಟು ಮಾಡಲಿದೆ ಎಂದು ಪತ್ರಿಕೆಗಳು ವಿಶ್ಲೇಷಿಸಿವೆ.

ಕಳೆದ 18 ತಿಂಗಳ ಅವಧಿಯಲ್ಲಿ ಪ್ರಧಾನಿ ಮೋದಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಳ್ಳೆಯ ಮುತ್ಸದ್ದಿ ಎಂದೇ ಬಿಂಬಿತವಾಗಿದ್ದಾರೆ. ಆದರೆ, ಈ ಭೇಟಿ ಒಂದು ರೀತಿಯಲ್ಲಿ ವಿಶಿಷ್ಟವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಮೋದಿ ಬ್ರಿಟನ್ ಪ್ರವಾಸ ಕಾರ್ಯಕ್ರಮ ನಿಯೋಜನೆಗೊಂಡಿರುವುದಕ್ಕೆ ಪತ್ರಿಕೆಗಳು ವಿಷಾದ ವ್ಯಕ್ತಪಡಿಸಿವೆ.

Write A Comment