ರಾಷ್ಟ್ರೀಯ

ಬಿಹಾರದಲ್ಲಿ 20ರಂದು 36 ಮಂದಿ ಸಚಿವರ ಸಂಪುಟ ಅಸ್ತಿತ್ವಕ್ಕೆ : ಜೆಡಿಯುಗೆ ಸಿಎಂ ಸಹಿತ 15, ಆರ್‌ಜೆಡಿಗೆ 16, ಕಾಂಗ್ರೆಸ್‌ಗೆ 5 ಸ್ಥಾನ

Pinterest LinkedIn Tumblr

nithish-lalu

ಪಾಟ್ನಾ, ನ.10: ಬಿಹಾರದಲ್ಲಿ ಇದೇ ಮೊದಲ ಬಾರಿಗೆ ಮಹಾಮೈತ್ರಿ ಕೂಟದ ಸರ್ಕಾರ ನ.20ರಂದು ಅಸ್ತಿತ್ವಕ್ಕೆ ಬರಲಿದ್ದು, ಒಟ್ಟು ಮೈತ್ರಿಕೂಟದ 178 ಶಾಸಕರಲ್ಲಿ ಪ್ರತಿ ಐವರು ಶಾಸಕರಿಗೆ, ಒಬ್ಬರಂತೆ ಸಚಿವರ ಆಯ್ಕೆ ಮಾಡಲಾಗಿದೆ. 71 ಸದಸ್ಯ ಬಲಹೊಂದಿರುವ ಜೆಡಿಯುಗೆ ಮುಖ್ಯಮಂತ್ರಿ ಸ್ಥಾನ ಸಹಿತ 15 ಸಚಿವಗಿರಿ, 80 ಶಾಸಕರ ಲಾಲೂಪ್ರಸಾದ್ ನೇತೃತ್ವದ ಆರ್‌ಜೆಡಿಗೆ 16 ಸಚಿವ ಸ್ಥಾನ ಹಾಗೂ 27 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್‌ಗೆ 5 ಸಚಿವ ಸ್ಥಾನಗಳು ಲಭ್ಯವಾಗಲಿವೆ. ನ.20ರಂದು ಒಟ್ಟು 36 ಮಂದಿ ಸಚಿವರ ಮಹಾಮೈತ್ರಿ ಸಂಪುಟ ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವಕ್ಕೆ ಬರಲಿದೆ.

Write A Comment