ರಾಷ್ಟ್ರೀಯ

2017ರಲ್ಲಿ ಬಿಎಸ್‌ಪಿ ಪಕ್ಷದ ಸರಕಾರ ರಚನೆ ಖಚಿತ: ಮಾಯಾವತಿ

Pinterest LinkedIn Tumblr

mayaಲಕ್ನೋ: ಬಿಹಾರ್ ಜನತೆ ತಪ್ಪು ನೀತಿಗಳು ಮತ್ತು ಕೋಮುವಾದದ ವಿರುದ್ಧ ಮತ ಚಲಾಯಿಸಿ ನಿತೀಶ್ ಮೈತ್ರಿಕೂಟದ ಗೆಲುವಿಗೆ ಕಾರಣವಾಗಿದ್ದು, ಮುಂಬರುವ 2017ರ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‌ಪಿ ಪಕ್ಷ ಅಧಿಕಾರಕ್ಕೆ ಬರುವುದನ್ನು ಯಾರು ತಡೆಯಲು ಸಾಧ್ಯವಿಲ್ಲ ಎಂದು ಬಿಎಸ್‌ಪಿ ನಾಯಕಿ, ಮಾಜಿ ಮುಖ್ಯಮಂತ್ರಿ ಮಾಯಾವತಿ ಹೇಳಿದ್ದಾರೆ.

ಕೇಂದ್ರ ಸರಕಾರದ ತಪ್ಪು ನೀತಿಗಳು ಮತ್ತು ಕೋಮುವಾದ, ಜನವಿರೋಧಿ ನಿಲುವುಗಳಿಗಾಗಿ ಜನತೆ ಮತಚಲಾಯಿಸಿದ್ದಾರೆ. ಉತ್ತರಪ್ರದೇಶದ ಜನತೆ ಕೂಡಾ ಈ ಬಾರಿ ಬಿಎಸ್‌ಪಿಯತ್ತ ಒಲವು ತೋರಿದ್ದರಿಂದ ಮುಂಬರುವ ಚುನಾವಣೆಯಲ್ಲಿ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಹಾರ್ ಚುನಾವಣೆಯಲ್ಲಿ ನಿತೀಶ್ ನೇತೃತ್ವದ ಮೈತ್ರಿಕೂಟ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಮಧ್ಯೆ ನೇರ ಹಣಾಹಣಿಯಿದ್ದರಿಂದ ಬಿಎಸ್‌ಪಿ ಪಕ್ಷಕ್ಕೆ ಭಾರಿ ನಷ್ಟವಾಯಿತು ಎಂದು ತಿಳಿಸಿದ್ದಾರೆ.

ಬಿಹಾರ್‌ನಂತಹ ರಾಜ್ಯಗಳಲ್ಲಿ ಕೋಮುವಾದಿಗಳು, ದಲಿತ ವಿರೋಧಿಗಳು, ಅಲ್ಪಸಂಖ್ಯಾತ ವಿರೋಧಿಗಳು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎನ್ನುವುದನ್ನು ಬಿಹಾರ್ ಜನತೆ ತೋರಿಸಿಕೊಟ್ಟಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಬಿಹಾರ್ ಚುನಾವಣೆ ಫಲಿತಾಂಶದ ಪ್ರಭಾವ ಮುಂದಿನ ವರ್ಷ ನಡೆಯಲಿರುವ ಉತ್ತರಪ್ರದೇಶದ ವಿಧಾನಸಭೆ ಚುನಾವಣೆಯ ಮೇಲೆ ಖಂಡಿತವಾಗಿ ಬೀಳಲಿದೆ. ಬಿಜೆಪಿ ಪರವಾಗಿರುವ ಸಮಾಜವಾದಿ ಪಕ್ಷದ ಸರಕಾರ ಚುನಾವಣೆಯಲ್ಲಿ ಖಚಿತವಾಗಿ ಸೋಲನುಭವಿಸಲಿದೆ ಎಂದು ಭವಿಷ್ಯ ನುಡಿದರು.

ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳು ಜನವಿರೋಧಿಯಾಗಿದ್ದಾರೆ ಎನ್ನುವುದನ್ನು ಬಿಹಾರ್ ಫಲಿತಾಂಶ ತೋರಿಸಿದೆ. ಆದ್ದರಿಂದ, ಮುಂಬರುವ ಚುನಾವಣೆಯಲ್ಲಿ ಬಿಎಸ್‌ಪಿ ಪಕ್ಷ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವ ಆತ್ಮವಿಶ್ವಾಸ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಮಾಯಾವತಿ ಹೇಳಿದ್ದಾರೆ.

Write A Comment