ರಾಷ್ಟ್ರೀಯ

ಬಿಹಾರದಲ್ಲಿ ಭರ್ಜರಿ ಗೆಲುವಿನತ್ತ ಜೆಡಿಯು ಮೈತ್ರಿಕೂಟ : ನಿತೀಶ್ ಮತ್ತೆ ಮುಖ್ಯಮಂತ್ರಿ

Pinterest LinkedIn Tumblr

nitishಪಾಟ್ನಾ: ಬಿಹಾರದ ವಿಧಾನಸಭೆ ಚುನಾವಣೆಯ ಮತಎಣಿಕೆಯಲ್ಲಿ ಆರ್‌ಜೆಡಿ, ಜೆಡಿಯು ಮತ್ತು ಕಾಂಗ್ರೆಸ್ ಮೈತ್ರಿಕೂಟ ಬಿಜೆಪಿಯನ್ನು ಹಿಂದಕ್ಕೆ ಹಾಕಿ ಮುನ್ನಡೆ ಸಾಧಿಸಿದ್ದು, ಬಿಹಾರದಲ್ಲಿ ಜೆಡಿಯು ಮೈತ್ರಿಕೂಟ  ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ.  ಜೆಡಿಯು ಮೈತ್ರಿಕೂಟ ಸ್ಪಷ್ಟ ಬಹುಮತದತ್ತ ಹೆಜ್ಜೆ ಹಾಕಿದೆ. ನಿತೀಶ್ ಕುಮಾರ್ 5ನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವುದು ನಿಶ್ಚಿತವಾಗಿದೆ.

ಜೆಡಿಯು ಮೈತ್ರಿಕೂಟ ಅಭ್ಯರ್ಥಿಗಳು 149 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಮ್ಯಾಜಿಕ್ ನಂಬರ್ ದಾಟಿದೆ. ಬಿಹಾರದಲ್ಲಿ ಸರ್ಕಾರ ರಚಿಸಲು ಮ್ಯಾಜಿಕ್ ನಂಬರ್  122.  ಬಿಜೆಪಿ ಪ್ಲಸ್ 89 ಸ್ಥಾನಗಳಲ್ಲಿ ಮತ್ತು ಇತರೆ 9 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.

ಮಹಾಘಟಬಂಧನ್‌ನ ಜೆಡಿಯು 72, ಆರ್‌ಜೆಡಿ 62,  ಕಾಂಗ್ರೆಸ್ 11 ಇತರೆ 7 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.  ಬಿಜೆಪಿ 73, ಎಲ್‌ಜೆಪಿ 8, ಎಚ್‌ಎಎಂ 5, ಆರ್‌ಎಲ್‌ಎಸ್‌ಪಿ 3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ಜೆಡಿಯು ಮೈತ್ರಿಕೂಟ ಮುನ್ನಡೆ ಸಾಧಿಸಿ ಗೆಲುವಿನ ಲಕ್ಷಣ ತೋರಿಸಿರುವ ಜೆಡಿಯು ಮತ್ತು ಆರ್‌ಜೆಡಿ ಕಚೇರಿಗಳ ಎದುರು ಕಾರ್ಯಕರ್ತರು ಸಂಭ್ರಮ ಆಚರಿಸಿದರು.

Write A Comment