ರಾಷ್ಟ್ರೀಯ

ಬಿಹಾರ ರಾಜಕೀಯ ರಂಗಕ್ಕೆ ಲಾಲೂ ಮತ್ತೆ ಗ್ರಾಂಡ್ ರೀಎಂಟ್ರಿ

Pinterest LinkedIn Tumblr

laluಪಾಟ್ನಾ, ನ.8-ಕಳೆದ 2010ರ ಬಿಹಾರ ಚುನಾವಣೆಯಲ್ಲಿ ಹೀನಾಯ ಸೋಲು, 15 ವರ್ಷಗಳ ದರ್ಬಾರಿಗೆ ತೆರೆ, ಬಹುಕೋಟಿ ರೂ. ಮೇವು ಹಗರಣದಲ್ಲಿ ನ್ಯಾಯಾಲಯದಿಂದ 6 ವರ್ಷ ಚುನಾವಣಾ ರಾಜಕೀಯಕ್ಕೆ ನಿಷೇಧ, ಕಾರಾಗೃಹ ವಾಸ…. ಈ ಎಲ್ಲ ಆಘಾತಗಳಿಂದ  ಇನ್ನೇನು ರಾಜಕೀಯ ಜೀವನ ಮುಗಿದೇಹೋಯಿತು ಎಂಬಂತೆ ರಾಜಕೀಯ ವಲಯದಲ್ಲಿ  ನಿರ್ಲಕ್ಷ್ಯಕ್ಕೊಳಗಾಗಿದ್ದ ಮಾಜಿ ಮುಖ್ಯಮಂತ್ರಿ, ಆರ್‍ಜೆಡಿ ನಾಯಕರಾದ ವರ್ಣರಂಜಿತ ರಾಜಕಾರಣಿ ಲಾಲೂ ಪ್ರಸಾದ್ ಯಾದವ್ ಮತ್ತೆ ಭಾರೀ ಸುದ್ಧಿಯೊಂದಿಗೆ ವಿಜಯದ ನಗೆ ಬೀರುತ್ತಾ ಕಿಂಗ್ ಮೇಕರ್ ಆಗಿ ಬಿಹಾರ ರಾಜ್ಯ ರಾಜಕೀಯ ರಂಗದಲ್ಲಿ ಮುಖ್ಯ ಭೂಮಿಕೆಗೆ ಪ್ರವೇಶಿಸಿದ್ದಾರೆ.

ಅಂದು ದೈತ್ಯನಂತೆ ಬಿಹಾರದಲ್ಲಿ ವಿಜೃಂಭಿಸಿದ ನಿತೀಶ್‍ಕುಮಾರ್ ಬಿಹಾರ ವಿಧಾನಸಭೇಯ 243 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆದ್ದು ಲಾಲೂರನ್ನು ಕತ್ತಲಕೂಪಕ್ಕೆ ತಳ್ಳಿದ್ದರು. ಅಂದು ಲಾಲೂಗೆ ದಕ್ಕಿದ್ದು ಕೇವಲ 22 ಸೀಟ್ ಮಾತ್ರ. 2005 ಹಾಗೂ 2010ರ ಚುನಾವಣೆಗಳು ಲಾಲೂ ಮತ್ತವರ ಪತ್ನಿ ರಾಟ್ರಿದೇವಿಯರ ಪಾಲಿಗೆ ಕರಾಳವಾಗಿತ್ತು. ಅದೇ ಸಂದರ್ಭದಲ್ಲೇ ನಿತೀಶ್, ಲಾಲೂ ಬದ್ಧ ವೈರಿಗಳಾಗಿಬಿಟ್ಟರು. ಆದರೆ ಇವರನ್ನು ಮತ್ತೆ ಭಾಯಿ-ಭಾಯಿ ಆಗುವಂತೆ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ಹೆಚ್ಚುತ್ತಿದ್ದ ವರ್ಚಸ್ಸು ಹಾಗೂ ರಾಜ್ಯದಲ್ಲಿ ಬಲಗೊಳ್ಳುತ್ತಿದ್ದ

Write A Comment