ರಾಷ್ಟ್ರೀಯ

ಬಿಹಾರ್ ವಿಧಾನಸಭೆ ಚುನಾವಣೆಯಲ್ಲಿ 190 ಕ್ಷೇತ್ರಗಳಲ್ಲಿ ಜೆಡಿಯು ಮೈತ್ರಿಕೂಟಕ್ಕೆ ಗೆಲುವು: ಲಾಲು

Pinterest LinkedIn Tumblr

laluಪಾಟ್ನಾ: ಬಿಹಾರ್ ವಿಧಾನಸಭೆ ಚುನಾವಣೆಯಲ್ಲಿ ಜೆಡಿಯು ಮೈತ್ರಿಕೂಟ 243 ಕ್ಷೇತ್ರಗಳಲ್ಲಿ 190 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.

ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಕೇವಲ 40 ಸ್ಥಾನಗಳು ಅಥವಾ ಅದಕ್ಕಿಂತ ಕಡಿಮೆ ಸ್ಥಾನಗಳಲ್ಲಿ ಜಯಗಳಿಸಿದೆ ಎಂದು ಲೇವಡಿ ಮಾಡಿದರು.

ಬಿಹಾರ್ ವಿಧಾನಸಭೆ ಚುನಾವಣೆಯಲ್ಲಿ ಚುನಾವಣೆ ವಿಷಯ ಸ್ಪಷ್ಟವಾಗಿತ್ತು. ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಮೀಸಲಾತಿ ವಿಷಯ ಪ್ರಸ್ತಾಪಿಸಿದ್ದರಿಂದ ಹಿಂದುಳಿದ ವರ್ಗದ ಮತದಾರರು ಎನ್‌ಡಿಎ ಮೈತ್ರಿಕೂಟವನ್ನು ವಿರೋಧಿಸಿ ನಿತೀಶ್ ಮೈತ್ರಿಕೂಟಕ್ಕೆ ಮತದಾನ ಮಾಡಿದ್ದಾರೆ ಎಂದರು.

ಜೆಡಿಯು ಮೈತ್ರಿಕೂಟಕ್ಕೆ ಬಿಹಾರ್ ಜನತೆ ಆಶೀರ್ವದಿಸಿದ್ದು, ನಿತೀಶ್ ಕುಮಾರ್ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಬಿಜೆಪಿ ಪಕ್ಷಕ್ಕೆ ಮತದಾರರು ಮುಖಭಂಗ ಮಾಡಿದ್ದಾರೆ ಎಂದು ಗುಡುಗಿದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ನೂರಾರು ಭರವಸೆಗಳನ್ನು ನೀಡಿದ್ದ ಪ್ರಧಾನಿ ಮೋದಿ, ಯಾವುದೇ ಭರವಸೆಗಳನ್ನು ಈಡೇರಿಸದೆ ಬಿಹಾರ್ ಜನತೆಯನ್ನು ಟೀಕಿಸಿರುವುದು ಬಿಹಾರಿಗಳಲ್ಲಿ ಆಕ್ರೋಶ ಮೂಡಿಸಿತ್ತು ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.

Write A Comment