ರಾಷ್ಟ್ರೀಯ

ಬಿಹಾರ್ ವಿಧಾನಸಭೆ ಚುನಾವಣೆ: ನಿತೀಶ್ ಮೈತ್ರಿಕೂಟಕ್ಕೆ ಬಹುಮತ ಎಂದ ಸಮೀಕ್ಷೆಗಳು

Pinterest LinkedIn Tumblr

nitiಪಾಟ್ನಾ: ಬಿಹಾರ್ ವಿಧಾನಸಭೆ ಚುನಾವಣೆಗೆ ಮತದಾನ ಅಂತ್ಯವಾಗಿದ್ದು, ನವೆಂಬರ್ 8 ರಂದು ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.ಚುನಾವಣೆ ಫಲಿತಾಂಶಕ್ಕಾಗಿ ನಿರೀಕ್ಷಿಸುತ್ತಿರುವಂತೆಯೇ ಕೆಲ ಸಮೀಕ್ಷೆಗಳು ನಿತೀಶ್ ಮೈತ್ರಿಕೂಟಕ್ಕೆ ಬಹುಮತ ದೊರೆಯಲಿದೆ ಎಂದು ವರದಿಗಳು ಪ್ರಕಟಿಸಿವೆ.

ಎಬಿಪಿ ನ್ಯೂಸ್ ಸಮೀಕ್ಷೆ ಪ್ರಕಾರ ಜೆಡಿಯು ಮೈತ್ರಿಕೂಟ 13-140 ಕ್ಷೇತ್ರಗಳಲ್ಲಿ ಜಯಗಳಿಸಲಿದ್ದರೆ, ಎನ್‌ಡಿಎ ಮೈತ್ರಿಕೂಟ 90-100 ಸ್ಥಾನಗಳಿಸಲಿದ್ದು, 13-23 ಸ್ಥಾನಗಳಲ್ಲಿ ಇತರ ಪಕ್ಷಗಳ ಜಯಗಳಿಸಲಿವೆ ಎಂದು ಪ್ರಕಟಿಸಿದೆ.

ನ್ಯೂಸ್ ಎಕ್ಸ್- ಸಿಎನ್‌ಎಕ್ಸ್ ಪ್ರಕಾರ, ನಿತೀಶ್ ನೇತೃತ್ವದ ಮೈತ್ರಿಕೂಟ 130-140 ಸ್ಥಾನಗಳಲ್ಲಿ ಜಯಗಳಿಸಲಿದ್ದರೆ ಎನ್‌ಡಿಎ 90-100 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ವರದಿಯಲ್ಲಿ ತಿಳಿಸಿದೆ.

ನ್ಯೂಸ್ ನೇಷನ್‌ ಸಮೀಕ್ಷೆಯ ಪ್ರಕಾರ, ಎನ್‌ಡಿಎ ಮೈತ್ರಿಕೂಟ 115-119 ಸ್ಥಾನಗಳಲ್ಲಿ ಜಯಗಳಿಸಲಿದ್ದು, ನಿತೀಶ್ ಮೈತ್ರಿಕೂಟ 120-124 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ತಿಳಿಸಿದೆ.

Write A Comment