ರಾಷ್ಟ್ರೀಯ

ಆರೆಸ್ಸೆಸ್ ಪಥ ಸಂಚಲನಕ್ಕೆ ಗುಲಾಬಿ ಹೂಗಳನ್ನು ಎರಚಿ ಸ್ವಾಗತಿಸಿದ ಮುಸ್ಲಿಂ ಸಮುದಾಯ

Pinterest LinkedIn Tumblr

rrsಅಜ್ಮೀರ್(ರಾಜಸ್ಥಾನ:  ಧರ್ಮದ ಬಂಧನಗಳನ್ನು ಕಿತ್ತೆಸೆದ ಮುಸ್ಲಿಂ ಭಾಂಧವರು, ಆರೆಸ್ಸೆಸ್ ಸದಸ್ಯರ ಪಥಸಂಚಲನ ಸಂದರ್ಭದಲ್ಲಿ ಗುಲಾಬಿ ಹೂಗಳ ದಳಗಳನ್ನು ಹಾಕಿ ಹೊಸ ಇತಿಹಾಸ ಬರೆದಿದ್ದಾರೆ.

ಆರೆಸ್ಸೆಸ್ ಆರಂಭವಾಗಿ 90 ವರ್ಷಗಳಾದ ಹಿನ್ನೆಲೆಯಲ್ಲಿ ಆಯೋಜಿಸಲಾದ ಆರೆಸ್ಸೆಸ್ ಸದಸ್ಯರ ಪಥ ಸಂಚಲನ, ದರ್ಗಾ ಷರೀಫ್ ದಾಟಿ ಮುಂದೆ ಸಾಗುತ್ತಿದ್ದಂತೆ ಮುಸ್ಲಿಮರು ಕಟ್ಟಡಗಳ ಮೇಲಿನಿಂದ ಹೂಗಳನ್ನು ಎರಚಿ ಸ್ವಾಗತಿಸಿದರು.

ಅಜ್ಮೀರ್ ನಗರದಲ್ಲಿ ಹಿಂದು ಮುಸ್ಲಿಂ ಸಮುದಾಯಗಳ ನಡುವೆ ವೈಷಮ್ಯವಿಲ್ಲ. ಆರೆಸ್ಸೆಸ್ ವಿರುದ್ಧದ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎನ್ನುವುದನ್ನು ಮುಸ್ಲಿಂ ಸಹೋದರರು ಸಾಬೀತುಪಡಿಸಿದ್ದಾರೆ. ಮುಂಬರುವ ದಿನಗಳಲ್ಲೂ ಕೂಡಾ ಶಾಂತಿ ಸಾಮರಸ್ಯದಿಂದ ಸಾಗುತ್ತದೆ ಎಂದು ಮುಸ್ಲಿಂ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.

Write A Comment