ಮನೋರಂಜನೆ

ಬಾಲಿವುಡ್‌ ಗಾಯಕ ಅಭಿಜಿತ್‌ ಭಟ್ಟಾಚಾರ್ಯ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲು

Pinterest LinkedIn Tumblr

Abhijeet Bhattacharya

ಮುಂಬೈ: ಬಾಲಿವುಡ್‌ ಗಾಯಕ ಅಭಿಜಿತ್‌ ಭಟ್ಟಾಚಾರ್ಯ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ. ಅಭಿಜಿತ್‌ ವಿರುದ್ಧ ಮಹಿಳೆಯೊಬ್ಬರು ಇಲ್ಲಿನ ಓಶಿವಾರಾ ಪೊಲೀಸ್‌ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಿಸಿದ್ದಾರೆ.

ನಿನ್ನೆ ಅಭಿಜಿತ್‌ ಮತ್ತು ತಂಡದವರು ಲೋಕವಾಡ ಪ್ರದೇಶದಲ್ಲಿ ದುರ್ಗಾಪೂಜೆಯ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ದೂರು ನೀಡಿದ್ದ ಮಹಿಳೆಯನ್ನು ಆಹ್ವಾನಿಸಲಾಗಿತ್ತು ಎನ್ನಲಾಗಿದೆ.

ಗಾಯಕ ಅಭಿಜಿತ್‌ ಅವರು ನನ್ನೊಂದಿಗೆ ಅನುಚಿತವಾಗಿ ವರ್ತಿಸಿದರಲ್ಲದೆ ನನ್ನ ಹಿಡಿದು ಎಳೆದಾಡಿದರು ಎಂದು ಆ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಅಭಿಜಿತ್‌ಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ದೂರು ನೀಡಿರುವ ಮಹಿಳೆ ನಿನ್ನೆ ನಡೆದ ಕಾರ್ಯಕ್ರಮದ ವೇದಿಕೆ ಮೇಲೆ ಪ್ರೇಕ್ಷಕರಿಗೆ ಅಡ್ಡವಾಗಿ ನಿಂತಿದ್ದರು. ಈ ಸಂದರ್ಭದಲ್ಲಿ ಪ್ರೇಕ್ಷಕರು ಗಲಾಟೆ ಮಾಡಿದ್ದಾರೆ. ಆದರೆ ಆ ಮಹಿಳೆ ಕೇಳಲಿಲ್ಲವಾದ್ದರಿಂದ ಕೂಡಲೇ ಅಭಿಜಿತ್‌ ಆ ಮಹಿಳೆಯನ್ನು ಹಿಂದಕ್ಕೆ ತಳ್ಳಿದರು ಎಂದು ಸ್ಥಳೀಯರು ತಿಳಿಸಿದ್ದಾರೆ.

Write A Comment