ರಾಷ್ಟ್ರೀಯ

ಅತ್ಯಾಚಾರಕ್ಕೆ ಪ್ರತಿಯಾಗಿ ಅತ್ಯಾಚಾರಿಯ ಪುತ್ರನ ರುಂಡ ಚೆಂಡಾಡಿ ಹಗೆ ತೀರಿಸಿಕೊಂಡ 13 ವರ್ಷದ ಬಾಲಕಿ ! ನಡೆದದ್ದು ಏನು …? ಇಲ್ಲಿದೆ ಓದಿ…

Pinterest LinkedIn Tumblr

w

ಲಖನೌ: 13 ವರ್ಷದ ಬಾಲಕಿಯೊಬ್ಬಳು ತನ್ನನ್ನು ಅತ್ಯಾಚಾರ ಮಾಡಿದವನ 5 ವರ್ಷದ ಮಗುವಿನ ತಲೆ ಕಡಿದು ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ತನ್ನ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯ ವಿರುದ್ಧ ಸೇಡು ತೀರಿಸುವುದಕ್ಕಾಗಿ ಬಾಲಕಿ ಆತನ ಐದು ವರ್ಷದ ಮಗನ ತಲೆ ಕಡಿದಿದ್ದಾಳೆ. ಈ ಘಟನೆ ಉತ್ತರ ಪ್ರದೇಶದ ಖೈರ್ ಎಂಬಲ್ಲಿ ನಡೆದಿದೆ.

ಐದು ವರ್ಷದ ಅಮಿತ್ ಮಂಗಳವಾರ ಸಂಜೆ ಮನೆ ಹೊರಗೆ ಆಟವಾಡುತ್ತಿದ್ದನು. ಅಲ್ಲಿಗೆ ಆಗಮಿಸಿದ ಬಾಲಕಿಯು ಆತನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹತ್ಯೆ ಮಾಡಿ, ಹುಡುಗನ ಮೃತ ದೇಹವನ್ನು ಇಟ್ಟಿಗೆಗಳಿಂದ ಜಜ್ಜಿ, ಪಾಲಿಥೀನ್ ಬ್ಯಾಗ್ ಒಂದರಲ್ಲಿ ಹಾಕಿ ಬೆಂಕಿ ಹಚ್ಚಿದ್ದಳು. ಮರು ದಿನ ಬಾಲಕನ ಅರ್ಧ ಸುಟ್ಟ ಮೃತ ದೇಹವನ್ನು ಕೆಲವು ನಾಯಿಗಳು ಬ್ಯಾಗ್ ನಿಂದ ಹೊರಗೆಳೆದು ಹಾಕಿದುದರಿಂದ ಘಟನೆ ಬೆಳಕಿಗೆ ಬಂತೆಂದು ಹೇಳಲಾಗಿದೆ.

ಬಾಲಕಿಯೊಂದಿಗೆ ಮೃತ ಹುಡುಗನೊಂದಿಗೆ ಕೊನೆಯದಾಗಿ ನೋಡಿದ್ದೆವು ಎಂದು ಹೆತ್ತವರು ಪೊಲೀಸರಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ, ಪೊಲೀಸರು ಬಾಲಕಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು. ವಿಚಾರಣೆಯ ವೇಳೆ ಬಾಯಿ ಬಿಟ್ಟ ಬಾಲಕಿ, ತಾನು ಹುಡುಗನನ್ನು ಕೊಂದಿರುವುದನ್ನು ಒಪ್ಪಿಕೊಂಡಳು ಎಂದು ಇನ್ಸ್ ಪೆಕ್ಟರ್ ರಾಜ್ ವೀರ್ ಸಿಂಗ್ ಹೇಳಿದ್ದಾರೆ.

ಹುಡುಗನ ತಂದೆ ರಿಂಕು ತನಗೆ ಅಮಲು ಪದಾರ್ಥ ನೀಡಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದನು. ಹೀಗಾಗಿ ತಾನು ಆತನ ಮಗನನ್ನು ಹತ್ಯೆಗೈದೆನೆಂದು ಬಾಲಕಿ ಹೇಳಿದ್ದಾಳೆ. ಎಫ್ ಐ ಆರ್ ದಾಖಲಿಸಿದ ಬಳಿಕ ಬಾಲಕಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಬಾಲಕಿಯ ತಂದೆ ರಿಂಕು ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದ್ದು. ಬಾಲಕಿಯ ಹೇಳಿಕೆ ದಾಖಲಿಸಿದ ಬಳಿಕ ರಿಂಕುನನ್ನು ಕೂಡ ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯ ವಿರುದ್ಧ ಕೊಲೆಗೆ ಸಂಬಂಧಿಸಿ ಐಪಿಸಿ ಕಲಂನಡಿ ಹಾಗೂ ಎಸ್ ಸಿ/ಎಸ್ ಟಿ ದೌರ್ಜನ್ಯ ತಡೆ ಕಾಯ್ದೆಯನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೃತ ಬಾಲಕನ ತಂದೆಯ ವಿರುದ್ಧ ಐಪಿಸಿಯಡಿ ಅತ್ಯಾಚಾರ ಹಾಗೂ ಅದಕ್ಕೆ ಸಂಬಂಧಿಸಿದ ಕಲಂಗಳನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಸ್ಕೊ ಕಾಯ್ದೆಯಡಿಯೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಆದರೆ, ಇದೊಂದು ಮಾಟ ಮಂತ್ರದ ವಿಷಯವಾಗಿ ಬಲಿಯ ನೆಪದಲ್ಲಿ ನಡೆದಿರಬಹುದಾದ ಕೊಲೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

Write A Comment