ತಿರುವನಂತಪುರಂ, ಅ.16: ಅದೆನೆ ಯಾವಾಗ್ ನೋಡಿದ್ರೂ ಫೇಸ್‌ಬುಕ್, ವಾಟ್ಸಪ್ ಅಂತಾ ಸಾಯ್ತಾ, ಗಂಡ ಫೋನ್ ಕಿತ್ಕೊಂಡಿದ್ದೇ ತಡ, ನವ ವಿವಾಹಿತೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.
ಹೆಂಡತಿಯ ಫೇಸ್‌ಬುಕ್ ಗೀಳು ಕಂಡು ಕ್ರೋಧಗೊಂಡ ಗಂಡ, ಆಕೆಯ ಮೊಬೈಲ್ ಕಸಿದುಕೊಂಡು ಕೊಡಲ್ಲ ಹೋಗು ಅನ್ನುತ್ತಿದ್ದಂತೆಯೇ ಹೆಂಡತಿ ಬಾರದ ಲೋಕಕ್ಕೆ ಹೋಗಿದ್ದಾಳೆ. ಗಂಡನೊಂದಿಗೆ ಜಗಳವಾಡಿ ಕೋಣೆಯ ಬಾಗಿಲು ಹಾಕಿಕೊಂಡ ಪತ್ನಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇನ್ನು ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಸಹಿಸದ ಪತಿ ಕೂಡ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದು, ಕುಟುಂಬದವರು ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
