ಕನ್ನಡ ವಾರ್ತೆಗಳು

ದಲಿತ ಯುವಕರಿಗೆ ಹಲ್ಲೆ ಪ್ರಕರಣ: ಕಂಡ್ಲೂರಿಗೆ ಉಡುಪಿ ಎಸ್ಪಿ ಕೆ. ಅಣ್ಣಾಮಲೈ ಭೇಟಿ

Pinterest LinkedIn Tumblr

Sp Annamalai_Kandlur_Visit (2)

ಕುಂದಾಪುರ: ಕುಂದಾಪುರ ಪರಿಸರದಲ್ಲಿ ಶಾಂತಿ ಕದಡುವ ಕೆಲಸ ದಿನಂಪ್ರತಿ ನಡೇಯುತ್ತಿದ್ದು ಈ ಬಗ್ಗೆ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಬಾಯಿ ಮಾತಲ್ಲಿ ಎಚ್ಚರಿಕೆ ನೀಡುತ್ತಿದ್ದು ಇದು ಫಲಪ್ರದವಾಗದ ಹಿನ್ನೆಲೆಯಲ್ಲಿ ಇನ್ನು ಕಠಿಣವಾಗಿಯೇ ಮುಂದುವರಿಯಬೇಕಾಗುತ್ತದೆ. ಎಲ್ಲರೂ ಒಗ್ಗೂಡಿ ಬಾಳಿದರೇ ಉತ್ತಮ ಎಂದು ಉಡುಪಿ ಎಸ್ಪಿ ಕೆ. ಅಣ್ಣಾಮಲೈ ಖಡಕ್ ಮಾತುಗಳನ್ನು ಹೇಳಿದ್ದಾರೆ.

ಬುಧವಾರ ರಾತ್ರಿ ದಲಿತ ಯುವಕರ ಮೇಲೆ ಭಿನ್ನಕೋಮಿನ ಯುವಕರು ನಡೇಸಿದ ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸಂಜೆ ಕಂಡ್ಲೂರಿಗೆ ಭೇಟಿ ನೀಡಿದ ಅವರು ಅಲ್ಲಿ ನೆರೆದವರ ಬಳಿ ಮಾತನಾಡಿದರು.

Sp Annamalai_Kandlur_Visit (11) Sp Annamalai_Kandlur_Visit (12) Sp Annamalai_Kandlur_Visit (6) Sp Annamalai_Kandlur_Visit (5) Sp Annamalai_Kandlur_Visit (10) Sp Annamalai_Kandlur_Visit (4) Sp Annamalai_Kandlur_Visit (3) Sp Annamalai_Kandlur_Visit (1) Sp Annamalai_Kandlur_Visit (7) Sp Annamalai_Kandlur_Visit (8) Sp Annamalai_Kandlur_Visit (9)

ಯಾರೋ ಎರಡು ಗುಂಪುಗಳನ್ನು ಎತ್ತಿಕಟ್ಟಿ ಅವರಲ್ಲಿ ಧರ್ಮದ ಹೆಸರಿನಲ್ಲಿ ಇಂತಹ ಕ್ರತ್ಯ ನಡೆಸಿ ಸಮಾಜದ ಶಾಂತಿ ಹಾಳು ಮಾಡುತ್ತಿದ್ದು ಇದು ಸರಿಯಲ್ಲ. ದಿನದಿಂದ ದಿನಕ್ಕೆ ಇಂತಹ ಚಟುವಟಿಕೆಗಳು ನಡೆಯುತ್ತ್ತಿದ್ದು ಇಲಾಖೆ ಸಹಿಸುವಷ್ಟು ಸಹಿಸಿದೆ. ಇನ್ನು ವಾರ್ನಿಂಗ್ ನೀಡಲ್ಲ ಬದಲಾಗಿ ಕಠಿಣ ಕ್ರಮಕ್ಕೆ ಮುಂದಾಗಲಿದ್ದೇವೆ ಎಂದು ಖಾರವಾಗಿಯೇ ನುಡಿದರು. ಇನ್ನು ತಮ್ಮ ಭಾವಚಿತ್ರವನ್ನು ಫ್ಲೆಕ್ಸ್ ನಲ್ಲಿ ಹಾಕಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅಣ್ಣಾಮಲೈ ಅವರು ಅದನ್ನು ಕೂಡಲೇ ತೆಗೆಯುವಂತೆ ಶಾರದೋತ್ಸವದ ಸಂಘಟಕರಿಗೆ ತಿಳಿಸಿದರು.

7 ಗಂಟೆಗೆ ಅಂಗಡಿ ಬಂದ್: ಕೋಮು ಸೂಕ್ಷ್ಮ ಪ್ರದೇಶವೆಂದೇ ಬಿಂಬಿತವಾದ ಕಂದ್ಲೂರಿನಲ್ಲಿ ಇಂತಹಾ ಘಟನೆಗಳು ನಡೆಯುದಕ್ಕೆ ಕಡಿವಾಣ ಹಾಕಿಯೇ ಸಿದ್ಧ. ಕೆಲವು ದಿನಗಳವರೆಗೆ ಕಂಡ್ಲೂರು ಪರಿಸರದಲ್ಲಿ ರತ್ರಿ ೭ ಗಂಟೆಗೆ ಅಂಗಡಿ ಮುಂಗಟ್ಟು ಬಂದ್ ಮಾಡುತ್ತೇವೆ. ಮದ್ಯದಂಗಡಿಗಳು ಈ ಹೊತ್ತಿನಲ್ಲಿಯೇ ಬಂದ್ ಮಾಡುತ್ತೇವೆ ಎಂದರು. ಹಾಗೂ ಈ ಭಾಗದ ಏನೇ ಸಮಸ್ಯೆಗಳಿದ್ದರೂ ಕೂಡಲೇ ಇಲಾಖೆಗೆ ಫೋನು ಮಾಡುವಂತೆಯೂ ತಿಳಿಸಿದರು.

ಎರಡು ಧರ್ಮದವರು ಒಗ್ಗೂಡಿ ಸೋದರರಂತೆ ಬೆರೆತು ಹಬ್ಬವನ್ನು ಆಚರಿಸಿ ಎಂದು ಎಸ್ಪಿ ಇದೇ ಸಂದರ್ಭ ನೆರೆದವರಲ್ಲಿ ಮನವಿ ಮಾಡಿದರು.

ಈ ಸಂದರ್ಭ ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಬೈಂದೂರು ವ್ರತ್ತನಿರೀಕ್ಷಕ ಸುದರ್ಶನ್, ಕುಂದಾಪುರ ಠಾಣಾಧಿಕಾರಿ ನಾಸೀರ್ ಹುಸೇನ್ ಮೊದಲಾದವರಿದ್ದರು.

Write A Comment