ರಾಷ್ಟ್ರೀಯ

ಉಗ್ರರ ದಾಳಿ ಶಂಕೆ: ಕಾರ್ಯಾಚರಣೆಗಿಳಿದ ಸೇನಾ ಪಡೆ; ಓರ್ವ ಉಗ್ರ ಸಾವು

Pinterest LinkedIn Tumblr

Indian-Armyಶ್ರೀನಗರ: ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಉಗ್ರರು ನುಸುಳಿಸಿರುವ ಶಂಕೆಯಿಂದಾಗಿ ಉಗ್ರರನ್ನು ಮಟ್ಟಹಾಕಲು ಕಾರ್ಯಾಚರಣೆಗಿಳಿದಿರುವ ಭಾರತೀಯ ಸೇನಾಪಡೆಯು ಶನಿವಾರ ರಾತ್ರಿಯಿಡೀ ನಡೆಸಿದ ಕಾರ್ಯಾಚರಣೆಯಲ್ಲಿ ಓರ್ವ ಉಗ್ರನನ್ನು ಹತ್ಯೆ ಮಾಡಿರುವುದಾಗಿ ಭಾನುವಾರ ವರದಿಗಳು ತಿಳಿಸಿವೆ.

ಹಂದ್ವಾರ ಪ್ರದೇಶ ಪ್ರದೇಶದಲ್ಲಿ ನಿನ್ನೆ ರಾತ್ರಿ ಕಾರ್ಯಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಜಾಛಲ್ದಾರಾ ಪ್ರದೇಶ ವಾಡೆರ್ ಬಲಾ ಬಳಿ ಅಡಗಿ ಕುಳಿತುಕೊಂಡಿದ್ದ ಉಗ್ರನನ್ನು ಭಾರತೀಯ ಸೇನಾ ಪಡೆ ಹತ್ಯೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ಉಗ್ರರು ಅಡಗಿಕುಳಿತಿರುವ ಹಲವು ಅನುಮಾನಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸೇನಾ ಕಾರ್ಯಾಚರಣೆ ಇಂದು ಸಹ ಮುಂದುವರೆದಿದ್ದು, ಈ ವರೆಗೂ ಯಾರೊಬ್ಬರಿಗೂ ಯಾವುದೇ ಪ್ರಾಣಹಾನಿ, ಗಾಯಗಳಾಗಿಲ್ಲ ಎಂದು ವರದಿಗಳು ತಿಳಿಸಿವೆ.

Write A Comment