ರಾಷ್ಟ್ರೀಯ

ಕಟಾರಾ ಹಂತಕರಿಗೆ ಮರಣದಂಡನೆ ನಿರಾಕರಿಸಿದ ಸುಪ್ರೀಂಕೋರ್ಟ್

Pinterest LinkedIn Tumblr

kataraನವದೆಹಲಿ: ನಿತೀಶ್ ಕಟಾರಾ ಹಂತಕರಾದ ವಿಕಾಸ್ ಮತ್ತು ವಿಶಾಲ್ ಯಾದವ್ ಅವರಿಗೆ ಮರಣದಂಡನೆ ಶಿಕ್ಷೆಯನ್ನು ನೀಡಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಇಂದು ತೀರ್ಪು ನೀಡಿದ್ದು,ನಿತೀಶ್ ಕಟಾರಾ ಹತ್ಯೆಯು ಗೌರವ ಹತ್ಯೆಯಲ್ಲ, ಇದು ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದು ಕರೆಯಲಾಗುವುದಿಲ್ಲ ಎಂದು ತಿಳಿಸಿದೆ.

ಸೋದರ ಸಂಬಂಧಿಗಳಾದ ವಿಕಾಸ್ ಮತ್ತು ವಿಶಾಲ್ ಯಾದವ್ ಅವರನ್ನು ಯುವ ಎಕ್ಸಿಕ್ಯೂಟಿವ್ ಹತ್ಯೆಗೆ ಸಂಬಂಧಿಸಿದಂತೆ 30 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ನಿತೀಶ್ ತಾಯಿ ನೀಲಮ್ ಕಟಾರಾ ತಮ್ಮ ಪುತ್ರನ ಹತ್ಯೆಯು ಮರ್ಯಾದೆ ಹತ್ಯೆ ಎಂದು ವಾದಿಸಿ ಅವರಿಬ್ಬರಿಗೆ ಮರಣದಂಡನೆ ವಿಧಿಸಬೇಕೆಂದು ಕೋರ್ಟ್ ಮೊರೆ ಹೋಗಿದ್ದರು.
ಅವರ ಕೋರಿಕೆಯನ್ನು ತಿರಸ್ಕರಿಸಿದ ಕೋರ್ಟ್,  ಇದು ಕೇವಲ ಹತ್ಯೆಯಾಗಿದ್ದರೂ ಘೋರ ಹತ್ಯೆಯಲ್ಲ, ಆರೋಪಿಗಳ ಕೃತ್ಯ ಖಂಡನೀಯವಾಗಿದ್ದರೂ ಮರಣದಂಡನೆಗೆ ಅರ್ಹವಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.

ನಿತೀಶ್ ಕಟಾರಾ ಅವರನ್ನು ಗಾಜಿಯಾಬಾದ್‌ನಲ್ಲಿ ಸಜೀವ ದಹಿಸಲಾಗಿತ್ತು. ಡಿಪಿ ಯಾದವ್ ಪುತ್ರಿ ಭಾರ್ತಿ ಯಾದವ್ ಅವರನ್ನು ಡೇಟಿಂಗ್ ಮಾಡುತ್ತಿದ್ದ ಕಟಾರಾ ಅವರನ್ನು ಭರ್ತಿ ಸೋದರ ವಿಕಾಸ್ ಮತ್ತು ಸೋದರ ಸಂಬಂಧಿ ವಿಶಾಲ್ ಅಪಹರಿಸಿ ಜೀವಂತ ದಹಿಸಿದ್ದರು. ಅವರ ದೇಹ ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿತ್ತು. ಪೊಲೀಸರು ಡಿಎನ್‌ಎ ಮಾದರಿಗಳ ಮೂಲಕ ಅದು ಕಟಾರಾ ದೇಹವೆಂದೇ ಗುರುತಿಸಿದ್ದರು.

Write A Comment