ರಾಷ್ಟ್ರೀಯ

ಪ್ರಣವ್ ಮುಖರ್ಜಿಗೆ 3 ಗೌರವ ಡಾಕ್ಟರೇಟ್

Pinterest LinkedIn Tumblr

Pranava_ಜೆರುಸಲೇಂ, ಅ.9: ಮುಂದಿನ ವಾರದಿಂದ ಜೋರ್ಡಾನ್, ಫೆಲಿಸ್ತೀನ್ ಮತ್ತು ಇಸ್ರೇಲ್‌ಗಳಿಗೆ ಆರು ದಿನಗಳ ಭೇಟಿ ನೀಡಲಿರುವ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಅಲ್ಲಿನ ಮೂರು ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳು ಗೌರವ ಡಾಕ್ಟರೇಟ್ ಪ್ರದಾನ ಮಾಡಲಿವೆ.

ಜೋರ್ಡಾನ್ ವಿಶ್ವವಿದ್ಯಾನಿಲಯವು (ಯುಜೆ) ರಾಜಕೀಯ ಶಾಸ್ತ್ರ ವಿಷಯದಲ್ಲಿ ಭಾರ ತದ ರಾಷ್ಟ್ರಪತಿಗಳಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದೆ ಎಂದು ವಿವಿ ಹೇಳಿಕೆಯೊಂದರಲ್ಲಿ ತಿಳಿಸಿದೆ. ಭಾರತ ಮತ್ತು ಫೆಲೆಸ್ತೀನ್ ನಡುವೆ ವಿಶೇಷ ಸಂಬಂಧವಿರುವ ಹಿನ್ನೆಲೆಯಲ್ಲಿ ಭಾರತದ ರಾಷ್ಟ್ರಪತಿಗಳಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲು ಬಹಳ ಹೆಮ್ಮೆ ಎನಿಸುತ್ತಿದೆ ಎಂದು ಫೆಲೆಸ್ತೀನ್‌ನ ಅಲ್-ಕುದ್ಸ್ ವಿಶ್ವವಿದ್ಯಾನಿಲಯವು ತಿಳಿಸಿದೆ.

ಜೆರುಸಲೇಂನ ಹೀಬ್ರೂ ವಿಶ್ವವಿದ್ಯಾನಿಲಯವು ವಿಶೇಷ ಸಮಾರಂಭವೊಂದರಲ್ಲಿ ರಾಷ್ಟ್ರಪತಿಗಳಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದೆ. ಪ್ರಣವ್ ಮುಖರ್ಜಿ ಜೊತೆಗೆ ಭಾರತದ ಪ್ರಮುಖ ವಿವಿಗಳ ಉಪಕುಲಪತಿಗಳು ಮತ್ತು ಮುಖ್ಯಸ್ಥರು ಪಶ್ಚಿಮ ಏಶ್ಯ ದೇಶಗಳಿಗೆ ತೆರಳುತ್ತಿದ್ದಾರೆ.

Write A Comment