ಘಾಜಿಯಾಬಾದ್ : ಭಾರತೀಯ ವಾಯುಸೇನೆಯ 83ನೇ ವರ್ಷಾಚರಣೆ ಇವತ್ತು ನಡೆಯಿತು. ಈ ಸಂಭ್ರಮದ ಕಾರ್ಯಕ್ರಮಕ್ಕೆ ಕ್ರಿಕೆಟ್ ದೇವರು, ಏರ್‍ಫೋರ್ಸ್‍ನ ಗೌರವ ಕ್ಯಾಪ್ಟನ್ ಸಚಿನ್ ತೆಂಡೂಲ್ಕರ್ ಕೂಡಾ ಸಾಕ್ಷಿಯಾದರು.
ಉತ್ತರ ಪ್ರದೇಶದ ಘಾಜಿಯಾಬಾದ್‍ನ ಹಿಂದೋನ್ ವಾಯುನೆಲೆಯಲ್ಲಿ ನಡೆದ ಸಮಾರಂಭದಲ್ಲಿ ಸಚಿನ್ ಕ್ಯಾಪ್ಟನ್ ಲುಕ್‍ನಲ್ಲಿ ಮಿಂಚಿದರು. ಭಾರತೀಯ ವಾಯುಪಡೆಯಲ್ಲಿ ಗೌರವ ಕ್ಯಾಪ್ಟನ್ ಎಂಬ ಕೀರ್ತಿಗೆ ಪಾತ್ರರಾದ ಮೊದಲ ಆಟಗಾರ ಸಚಿನ್. ಈ ಬಗ್ಗೆ ಸ್ವತಃ ಸಚಿನ್ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಇದೊಂದು ಹೆಮ್ಮೆಯ ಸಂಗತಿ ಎಂದು ಸಾಮಾಜಿಕ ಜಾಲತಾಣ ಫೇಸ್‍ಬುಕ್‍ನಲ್ಲಿ ಸಚಿನ್ ಹಾಕಿಕೊಂಡಿದ್ದಾರೆ.


