ರಾಷ್ಟ್ರೀಯ

18 ನಿಮಿಷದಲ್ಲಿ ಜಾವಾ ಪರೀಕ್ಷೆ ಬರೆದ 10 ವರ್ಷದ ಅತ್ಯಂತ ಕಿರಿಯ ಸಾಫ್ಟ್‌ವೇರ್ !

Pinterest LinkedIn Tumblr

ronil shah

ಅಹಮದಾಬಾದ್: ಸಾಫ್ಟ್‌ವೇರ್ ಎಂಜನಿಯರ್‌ಗಳ ಆಯ್ಕೆಗೆ ನಡೆಯುವ ಜಾವಾ ಪರೀಕ್ಷೆಯಲ್ಲಿ 10 ವರ್ಷದ ಪೋರನೊಬ್ಬ ಇತಿಹಾಸ ಬರೆದಿದ್ದಾನೆ. 2 ಗಂಟೆ 56 ನಿಮಿಷದ ಪರೀಕ್ಷೆಯನ್ನು ಕೇವಲ 18 ನಿಮಿಷದಲ್ಲಿ ಪೂರ್ಣಗೊಳಿಸುವ ಮೂಲಕ ಅತ್ಯಂತ ಕಿರಿಯ ಸಾಫ್ಟ್‌ವೇರ್ ಡೆವಲಪರ್ ಎಂಬ ಕೀರ್ತಿಗೆ ಪಾತ್ರನಾಗಿದ್ದಾನೆ.

ಅಹ್ಮದಾಬಾದ್‌ನ ಯುರೋ ಶಾಲೆಯ ವಿದ್ಯಾರ್ಥಿಯಾಗಿರುವ ರೋನಿಲ್ ಶಾ, ಅಮೆರಿಕ ಮೂಲದ ಒರಾಕಲ್ ವಿಶ್ವವಿದ್ಯಾಲಯ ಏರ್ಪಡಿಸಿದ್ದ ಜಾವಾ ಸ್ಟ್ಯಾಂಡರ್ಡ್ ಎಡಿಷನ್ 6 ಪ್ರೋಗ್ರಾಂ ಸರ್ಟಿಫೈಟ್ ಪ್ರೊಫೆಷನಲ್ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆದುಕೊಂಡಿದ್ದಾನೆ.

ರೋನಿಲ್ ನಾಲ್ಕನೇ ವಯಸ್ಸಿನವನಿದ್ದಾಗ ಕಂಪ್ಯೂಟರ್‌ನಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ, 6ನೇ ವಯಸ್ಸಿಗೆ ಕಂಪ್ಯೂಟರ್‌ನಲ್ಲಿ ಈತ ಅನಿಮೇಶನ್, ಕೋರಲ್ ಡ್ರಾ, ಸಿ ಮತ್ತು ಸಿ ಪ್ಲಸ್ ಪ್ರೋಗ್ರಾಂಗಳನ್ನು ಕಲಿಯಲಾರಂಭಿಸಿದ್ದ.

ರೋನಿಲ್‌ನ ಈ ಸಾಧನೆಗೆ ಆತನ ತಂದೆ ಸಂತೋಷ ವ್ಯಕ್ತಪಡಿಸಿದ್ದಾರೆ. ಅಲ್ಲದೆ ರೋನಿಲ್‌ಗೆ ರೋಬೊಟಿಕ್ಸ್ ಕಲಿಯುವ ಹಂಬಲವಿದೆ. ಆ ಹಿನ್ನೆಲೆಯಲ್ಲಿ ಮುಂದಿನ ವರ್ಷ ಮುಂಬೈನಲ್ಲಿ ನಡೆಯಲಿರುವ ರೋಬೊಟಿಕ್ಸ್ ಪರೀಕ್ಷೆಗೆ ಆತನನ್ನು ತಯಾರಿ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಕಂಪ್ಯೂಟರ್‌ನ ಅಭಿಮಾನಿ ಆಗಿರುವ ರೋನಿಲ್ ದಿನದ ಭಾಗಶಃ ಭಾಗವನ್ನು ಕಂಪ್ಯೂಟರ್ ಮುಂದೆಯೇ ಕಳೆಯುತ್ತಾನೆ. ಅಲ್ಲದೆ ಆತನ ಸತತ ಪರಿಶ್ರಮವೇ ಈ ಸಾಧನೆ ಕಾರಣ ಎಂದು ತಿಳಿಸಿದ್ದಾರೆ.

Write A Comment