ರಾಷ್ಟ್ರೀಯ

ಅಧಿಕಾರಿ ಮನೆಯಲ್ಲಿ 53 ದುಬಾರಿ ಸ್ಕಾಚ್ ಬಾಟಲ್ !

Pinterest LinkedIn Tumblr

Scotch

ಚಂಡೀಗಡ, ಅ.7: ಪಂಜಾಬ್‍ನಲ್ಲಿ ಸರ್ಕಾರಿ ಅಧಿಕಾರಿಯೊಬ್ಬರ ಸರ್ಕಾರಿ ಮನೆಯಲ್ಲಿ ದುಬಾರಿ ಬೆಲೆಯ 53 ಸ್ಕಾಚ್ ಬಾಟಲ್ (ಪಾಟಿಯಾಲ ಪೆಗ್) 12 ಸಾವಿರ ಅಮೆರಿಕನ್ ಡಾಲರ್(18 ಲಕ್ಷ ರೂ.) ಹಣ ದೊರೆತಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ.

ರಾಜ್ಯ ಕೃಷಿ ನಿರ್ದೇಶಕ ಮಂಗಲ್ ಸಂಧು ಎಂಬವರ ಮನೆಯಲ್ಲಿ ಭಾನುವಾರ ರಾತ್ರಿ ಇದು ಪತ್ತೆಯಾಗಿದೆ.

92,130 ಲೀಟರ್ ಕ್ರಿಮಿನಾಶಕ ಒಬ್ಲೆರಾನ್ ಖರೀದಿಯಲ್ಲಿ 33 ಕೋಟಿ ರೂ. ಅವ್ಯವಹಾರಕ್ಕೆ ಸಂಬಂಧಿಸಿ ಮಂಗಲ್ ಸಂಧು ಎಂಬವರನ್ನು ಬಂಧಿಸಲಾಗಿದೆ.

ಕಳೆದ ತಿಂಗಳು ಪಂಜಾಬ್‍ನಲ್ಲಿ 11,780 ಎಕರೆ ಪ್ರದೇಶದ ಹತ್ತಿ ಬೆಳೆಗೆ ಬಂದಿರುವ ಪೊದರು ಕೀಟ ನಿವಾರಣೆಗೆ ಬಳಸಿರುವ ಕ್ರಿಮಿನಾಶಕ ಪರಿಣಾಮಕಾರಿಯಾಗಿಲ್ಲ ಎಂದು ಕಾಂಗ್ರೆಸ್ ಮತ್ತು ರೈತರು ಆರೋಪಿಸಿದ್ದಾರೆ.

ಅಧಿಕಾರಿಯ ಮನೆಯ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಮದ್ಯದ ಬಾಟಲಿಗಳನ್ನು ಸಾಲಾಗಿ ಇಟ್ಟಿರುವುದು ಪತ್ತೆಯಾಗಿದೆ. ಬ್ಲೂ ಲೇಬಲ್ ಮದ್ಯ 750 ಎಂಎಲ್ ಬಾಟಲಿಗಳು, ಐದು ಚಿವಾಸ್ ರೀಗಲ್ ಬಾಟಲ್‍ಗಳು, ನಾಲ್ಕು ಬ್ಲಾಕ್ ಲೇಬಲ್ ಬಾಟಲ್‍ಗಳು ದೊರತಿದ್ದು, ಇವುಗಳು ಕ್ರಮವಾಗಿ ತಲಾ 18000, 4,200 ಮತ್ತು 5,500 ರೂ. ಬೆಲೆಬಾಳುತ್ತವೆ.

ಮಾತ್ರವಲ್ಲ ಮಂಗಲ್ ಸಂಧು ಅವರ ಕೊಠಡಿಯಿಂದ 7.5 ಲಕ್ಷ ರೂ.ನಗದು, 2290 ಕೆನಡಿಯನ್ ಡಾಲರ್ (1.13 ಲಕ್ಷ ರೂ.) ದೊರೆತಿವೆ. ಮಲಗುವ ಕೊಠಡಿಯಲ್ಲಿ ಅಡಗಿಸಿಟ್ಟಿದ್ದ 4.14 ಲಕ್ಷ ರೂ. ನಗದು ಕೂಡ ದೊರೆತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Write A Comment