ರಾಷ್ಟ್ರೀಯ

ಸೀನುವ ಕೋತಿ, ನಡೆಯುವ ಮೀನು: ಹಿಮಾಲಯದಲ್ಲಿ ಹೊಸ ಜೀವಿಗಳ ಪತ್ತೆ

Pinterest LinkedIn Tumblr

walking fish

ನವದೆಹಲಿ: ಸುಮಾರು ದೂರ ನೆಲದ ಮೇಲೆ ನಡೆದು ವಾತಾವರಣದ ಗಾಳಿಯನ್ನೇ ಉಸಿರಾಡಿ ಬದುಕಬಲ್ಲ ಮೀನು, ಮಳೆಯಲ್ಲಿ ಸೀನುವ ಕೋತಿಯನ್ನೂ ಒಳಗೊಂಡಂತೆ ಪೂರ್ವ ಹಿಮಾಲಯದಲ್ಲಿ ೨೦೦ ಬಗೆಯ ಹೊಸ ಜೀವಿಗಳನ್ನು ಪತ್ತೆ ಹಚ್ಚಿರುವುದಾಗಿ ಲಾಭ ರಹಿತ ಸಂಸ್ಥೆ ಡಬ್ಲ್ಯುಡಬ್ಲ್ಯುಎಫ್ ಹೇಳಿಕೆಯಲ್ಲಿ ತಿಳಿಸಿದೆ.

ಸೋಮವಾರ ಬಿಡುಗಡೆಯಾದ ‘ಹಿಡನ್ ಹಿಮಾಲಯಾಸ್: ಎಷಿಯಾಸ್ ವಂಡರ್ಲ್ಯಾಂಡ್’ ಎಂಬ ವರದಿಯಲ್ಲಿ ೨೦೦ ಬಗೆಯ ಜೀವರಾಶಿಯಲ್ಲಿ ೧೩೩ ಬಗೆಯ ಸಸ್ಯಗಳು, ೩೯ ಬಗೆಯ ಆಕಶೇರುಕಗಳು, ೨೬ ಬಗೆಯ ಮೀನುಗಳು, ೧೦ ಬಗೆಯ ಉಭಯವಾಸಿಗಳು, ಒಂದು ಸರೀಸೃಪ, ಒಂದು ಪಕ್ಷಿ ಮತ್ತು ಒಂದು ಸಸ್ತನಿಯನ್ನು ೨೦೦೯ ಮತ್ತು ೨೦೧೪ರ ಮಧ್ಯ ಸಂಶೋಧಿಸಿರುವುದಾಗಿ ತಿಳಿಸಿದೆ.

ಇದು ಭೂತಾನ್, ಭಾರತ, ನೇಪಾಳ, ಮಯನ್ಮಾರ್, ಬರ್ಮಾ ಮತ್ತು ಟಿಬೆಟ್ ದೇಶಗಳ ಹಿಮಾಲಯ ಶ್ರೇಣಿಯನ್ನು ಒಳಗೊಂಡಿದೆ.

ಈ ಭಾಗದಲ್ಲಿ ಹೆಚ್ಚುತ್ತಿರುವ ಮನುಷ್ಯನ ಹಸ್ತಕ್ಷೇಪ, ಅಭುವೃದ್ಧಿ ಕೆಲಸಗಳು ಈ ಜೀವರಾಶಿಗೆ ಮಾರಕವಾಗಬಹುದು ಎಂದು ಕೂಡ ಈ ಸಂಸ್ಥೆ ಎಚ್ಚರಿಸಿದೆ.

Write A Comment