ನವದೆಹಲಿ: ಕಳೆದ 25 ವರ್ಷಗಳ ಹಿಂದೆ ಭಾರತದಿಂದ ಕಾಣೆಯಾಗಿದ್ದ ದುರ್ಗಾ ಮೂರ್ತಿಯನ್ನು ಜರ್ಮನಿ ಭಾರತಕ್ಕೆ ಮರಳಿಸಿದೆ. ಜರ್ಮನಿಯ ಚಾನ್ಸಲರ್ ಎಂಜೆಲಾ ಮಾರ್ಕೆಲ್ ಮೂರ್ತಿಯನ್ನು ಮೋದಿಯವರ ಕೈಗಿತ್ತಿದ್ದಾರೆ. ದುರ್ಗಾಮಾತೆ ಮೂರ್ತಿಯನ್ನು ಮರಳಿ ಭಾರತಕ್ಕೆ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಎಂಜೆಲಾ ಮಾರ್ಕೆಲ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಆ ಬಳಿಕ ಮಾತನಾಡಿದ ಪ್ರಧಾನಿ ದುರ್ಗಾದೇವಿ ಮಹಿಷಾಸುರ ಮರ್ದಿನಿ ಅವತಾರವೆತ್ತಿದ್ದು ದುಷ್ಟಶಕ್ತಿಯ ವಿರುದ್ಧ ಸತ್ಯದ ಗೆಲುವಿನ ಸಂಕೇತವಾಗಿದೆ ಎಂದಿದ್ದಾರೆ.
10ನೇ ಶತಮಾನದಲ್ಲಿ ನಿರ್ಮಾಣವಾದ ವಿಗ್ರಹ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ದೇವಾಲಯದಿಂದ 1990ರಲ್ಲಿ ಕಾಣೆಯಾಗಿತ್ತು. ಬಳಿಕ ಜರ್ಮನಿಯ ಸ್ಟಟ್ಗಾರ್ಟ್ ಲಿಂಡೆನ್ ಮ್ಯೂಸಿಯಂನಲ್ಲಿ ಪತ್ತೆಯಾಗಿತ್ತು.
ಭಾರತೀಯ ಕಲಾ ವ್ಯಾಪಾರಿ ಸುಭಾಸ ಕಪೂರ್ ಈ ವಿಗ್ರಹವನ್ನು ಕದ್ದು ಸಾಗಿಸಿದ್ದ ಎಂದು ಹೇಳಲಾಗುತ್ತಿದೆ. 2011ರಲ್ಲಿ ಸುಭಾಸ ಕಪೂರ್‌ನನ್ನು ಜರ್ಮನಿಯಲ್ಲಿ ಬಂಧಿಸಲಾಗಿತ್ತು.