ರಾಷ್ಟ್ರೀಯ

ದಾದ್ರಿ ಘಟನೆಯಿಂದ ದೇಶದ ಘನತೆಗೆ ಪೆಟ್ಟು: ಅರುಣ್ ಜೇಟ್ಲಿ

Pinterest LinkedIn Tumblr

Jaitly___ನ್ಯೂಯಾರ್ಕ್, ಅ.6: ಗೋಮಾಂಸ ತಿಂದಿದ್ದಾರೆ ಎಂಬ ವದಂತಿ ಹಬ್ಬಿಸಿ ಉತ್ತರಪ್ರದೇಶದಲ್ಲಿ ವ್ಯಕ್ತಿಯೋರ್ವರನ್ನು ಥಳಿಸಿ ಕೊಂದ ಘಟನೆಯನ್ನು ಖಂಡಿಸಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ, ಇಂಥ ಘಟನೆಗಳು ದೇಶದ ಘನತೆಯನ್ನು ಘಾಸಿಗೊಳಿಸುತ್ತವೆ ಎಂದಿದ್ದಾರೆ.
‘‘ಭಾರತ ಒಂದು ಪ್ರಬುದ್ಧ ಸಮಾಜ. ನಾವು ಈ ಮಾದರಿಯ ಘಟನೆಗಳನ್ನು ಮೀರಿ ನಿಲ್ಲಬೇಕು. ಯಾಕೆಂದರೆ, ಇಂಥ ಘಟನೆಗಳು ನಮ್ಮ ದೇಶಕ್ಕೆ ಒಳ್ಳೆಯ ಹೆಸರು ತರುವುದಿಲ್ಲ’’ ಎಂದು ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಸೋಮವಾರ ಉಪನ್ಯಾಸ ನೀಡಿದ ಬಳಿಕ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೇಟ್ಲಿ ಅಭಿಪ್ರಾಯಪಟ್ಟರು.
ಸರಕಾರ ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುತ್ತಿರುವ ಸಮಯದಲ್ಲಿ ದಾದ್ರಿಯಲ್ಲಿ ಗೋಮಾಂಸ ತಿಂದ ಸಂಶಯದಲ್ಲಿ ವ್ಯಕ್ತಿಯೋರ್ವನನ್ನು ಗುಂಪೊಂದು ಕೊಂದಿರುವ ಘಟನೆಯ ಬಗ್ಗೆ ಪ್ರತಿಕ್ರಿಯಿಸುವಂತೆ ವರದಿಗಾರರು ಕೋರಿದಾಗ ಅವರು ಈ ಅಭಿಪ್ರಾಯ ನೀಡಿದರು. ಬೀಫ್ ತಿಂದಿದ್ದಾರೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ದದ್ರಿಯಲ್ಲಿ 50 ವರ್ಷದ ಅಖ್ಲಾಕ್‌ರನ್ನು ಆಕ್ರೋಶಿತ ಗುಂಪೊಂದು ಇತ್ತೀಚೆಗೆ ಥಳಿಸಿ ಕೊಂದಿರುವುದನ್ನು ಸ್ಮರಿಸಬಹುದಾಗಿದೆ. ಘಟನೆಯಲ್ಲಿ ಆತನ ಮಗ ಗಂಭೀರವಾಗಿ ಗಾಯಗೊಂಡಿದ್ದಾರೆ.

Write A Comment