ರಾಷ್ಟ್ರೀಯ

ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಹಿಂದಿರುಗಿಸಿದ ನೆಹರು ಸೊಸೆ

Pinterest LinkedIn Tumblr

NAYANTARAಹೊಸದಿಲ್ಲಿ, ಅ.6: ಖ್ಯಾತ ಲೇಖಕಿ ಹಾಗೂ ಜವಾಹರಲಾಲ್ ನೆಹರು ಅವರ ಸೊಸೆ ನಯನತಾರಾ ಸೆಹಗಲ್, 1986ರಲ್ಲಿ ತಾನು ಸ್ವೀಕರಿಸಿದ್ದ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಮರಳಿಸಲು ನಿರ್ಧರಿಸಿದ್ದಾರೆ.

ದೇಶದ ಸಾಂಸ್ಕೃತಿಕ ವೈವಿಧ್ಯತೆಯನ್ನು ರಕ್ಷಿಸಲು ಸರಕಾರ ವಿಫಲವಾಗಿರುವುದರ ವಿರುದ್ಧ ಪ್ರತಿಭಟನೆಯನ್ನು ವ್ಯಕ್ತಪಡಿಸಿ ತಾವು ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.

‘ಅನ್‌ಮೇಕಿಂಗ್ ಆಫ್ ಇಂಡಿಯಾ’ ಎಂಬ ಹೆಸರಿನಲ್ಲಿ ಬರೆಯಲಾದ ಅವರ ಬಹಿರಂಗ ಪತ್ರದ ಪೂರ್ಣಪಾಠವನ್ನು ‘ಇಂಡಿಯನ್‌ಕಲ್ಚರಲ್‌ಫೋರಂಡಾಟ್‌ಇನ್’ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಭಾರತದ ಸಾಂಸ್ಕೃತಿಕ ವೈವಿಧ್ಯತೆಯು ಅನೈತಿಕ ದಾಳಿಗೆ ಒಳಗಾಗಿದೆ. ವಿರೋಧಿಸುವ ಹಕ್ಕನ್ನು ಎತ್ತಿ ಹಿಡಿದಿರುವ ಎಲ್ಲ ಭಾರತೀಯರನ್ನು ಬೆಂಬಲಿಸಿ ಪ್ರಶಸ್ತಿಯನ್ನು ವಾಪಸ್ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ. ಹಲ್ಲೆ-ಬೆದರಿಕೆ-ಭೀತಿಗಳುಳ್ಳ ಪ್ರಭುತ್ವದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವೌನ ತಾಳಿದ್ದಾರೆಂದು ಅವರು ಆರೋಪಿಸಿದ್ದಾರೆ. ತನ್ನ ತತ್ತ್ವ-ಸಿದ್ಧಾಂತಗಳನ್ನು ಬೆಂಬಲಿಸುವ ದಾಳಿಕೋರರನ್ನು ಮೂಲೆಗುಂಪು ಮಾಡುವ ಧೈರ್ಯವನ್ನು ಅವರು (ಪ್ರಧಾನಿ ಮೋದಿ) ತೋರಲಾರರು ಎಂದೇ ನಾವೆಲ್ಲ ಭಾವಿಸಬೇಕಾಗುತ್ತದೆ ಎಂದು ಸೆಹಗಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Write A Comment