ರಾಷ್ಟ್ರೀಯ

ದೊಡ್ಡ ಮೊತ್ತದ ಕಪ್ಪುಹಣ ಭಾರತದಲ್ಲೇ ಇದೆ: ಜೇಟ್ಲಿ

Pinterest LinkedIn Tumblr

3-299398-arun-jaitley-2ಹೊಸದಿಲ್ಲಿ, ಅ.4: ದೊಡ್ಡ ಮೊತ್ತದ ಕಪ್ಪು ಹಣ ಈಗಲೂ ಭಾರತದಲ್ಲೇ ಇದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ರವಿವಾರ ಹೇಳಿದ್ದಾರೆ. ಕ್ಷಮಾ ಅವಧಿಯಲ್ಲಿ ವಿದೇಶಗಳಲ್ಲಿರುವ ತಮ್ಮ ಕಪ್ಪು ಹಣವನ್ನು ಬಹಿರಂಗಪಡಿಸದವರು ಅದರ ಪರಿಣಾಮಗಳನ್ನು ಎದುರಿಸುತ್ತಾರೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

‘‘ದೊಡ್ಡ ಪ್ರಮಾಣದ ಕಪ್ಪು ಹಣ ಈಗಲೂ ಭಾರತದಲ್ಲಿದೆ. ಹಾಗಾಗಿ, ನಮ್ಮ ರಾಷ್ಟ್ರೀಯ ಮನೋಭಾವದಲ್ಲಿ ಬದಲಾವಣೆಯನ್ನು ಮಾಡಿಕೊಂಡು, ಪ್ಲಾಸ್ಟಿಕ್ ಕರೆನ್ಸಿಯನ್ನು ಸಾಮಾನ್ಯವಾಗಿ ಹಾಗೂ ನಗದು ಹಣವನ್ನು ಅಗತ್ಯ ಸಂದರ್ಭಗಳಲ್ಲಿ ಮಾತ್ರ ಬಳಸಬೇಕು. ಸಮಸ್ಯೆಯ ಬಗ್ಗೆ ಅರಿವಿರುವ ಸರಕಾರ, ಈ ಬದಲಾವಣೆಯನ್ನು ಮೂರ್ತ ರೂಪಕ್ಕೆ ತರುವ ನಿಟ್ಟಿನಲ್ಲಿ ವಿವಿಧ ಪ್ರಾಧಿಕಾರಗಳೊಂದಿಗೆ ಸಂಪರ್ಕದಲ್ಲಿದೆ’’ ಎಂದು ಜೇಟ್ಲಿ ತಿಳಿಸಿದ್ದಾರೆ.

ಭಾರೀ ಸಂಖ್ಯೆಯ ಪೇಮೆಂಟ್ ಗೇಟ್‌ವೇಗಳ ಸ್ಥಾಪನೆ, ಇಂಟರ್‌ನೆಟ್ ಬ್ಯಾಂಕಿಂಗ್, ಪೇಮೆಂಟ್ ಬ್ಯಾಂಕ್‌ಗಳು ಹಾಗೂ ಬೆಳೆಯುತ್ತಿರುವ ಇ-ವಾಣಿಜ್ಯ ಸಂಸ್ಕೃತಿಗಳು ಬ್ಯಾಂಕ್ ವ್ಯವಹಾರಗಳು ಮತ್ತು ಪ್ಲಾಸ್ಟಿಕ್ ಹಣದ ಬಳಕೆಗಳನ್ನು ಗಣನೀಯವಾಗಿ ವೃದ್ಧಿಸಿವೆ ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಹಣಕಾಸು ಸಚಿವರು ಹೇಳಿದ್ದಾರೆ.

Write A Comment