ರಾಷ್ಟ್ರೀಯ

ಉತ್ತರ ಪ್ರದೇಶದಲ್ಲಿ ಬಾಲಕನೋರ್ವನ `ಶೌಚಾಲಯಕ್ರಾಂತಿ’: 12 ಶೌಚಾಲಯ ನಿರ್ಮಿಸಿದ ಬಾಲಕ! ಯಾಕೆ ಈ ಸಾಧನೆ ಮಾಡಿದ ಗೊತ್ತೇ ..?

Pinterest LinkedIn Tumblr

up-boy

ಲಖನೌ, ಅ.3: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ `ಸ್ವಚ್ಛಭಾರತ’ ಅಭಿಯಾನಕ್ಕಿಂದು 1 ವರ್ಷ. ನಮ್ಮ ದೇಶದಲ್ಲಿ ಶೌಚಾಲಯಕ್ಕಿಂತಲೂ ಹೆಚ್ಚು ಮೊಬೈಲ್ಗಳಿವೆ ಎಂಬುದೇ ದುರಂತ. ಈ ಮಧ್ಯೆ ಉತ್ತರ ಪ್ರದೇಶದಲ್ಲಿ ಬಾಲಕನೋರ್ವ `ಶೌಚಾಲಯಕ್ರಾಂತಿ’ ಮಾಡಿದ್ದಾನೆ.

ಸೈಕಲ್ನಲ್ಲಿ ಓಡಾಡುವ ಬಾಲಕ ಓಂಕಾರ್ ದುಬೇ ಉತ್ತರ ಪ್ರದೇಶದ ಕುಮಾರಿಯ ಧುಮನ್ ಹಳ್ಳಿಯವನು. ಈತನ ತಂದೆ ಲಾರಿ ಡ್ರೈವರ್ ಆಗಿದ್ದು, ಇವರ ಮನೆಯಲ್ಲಿ ಶೌಚಾಲಯವಿರಲಿಲ್ಲ. ಹೀಗಾಗಿ ಪ್ರತಿ ಸಲವೂ ಈತನ ಕುಟುಂಬಕ್ಕೆ ಬಯಲಿನಲ್ಲಿ ಮಲ ವಿಸರ್ಜನೆ ಮಾಡುವುದು ಕಷ್ಟವಾಗಿತ್ತು. ಇದಕ್ಕಾಗಿ ಶೌಚಾಲಯ ನಿರ್ಮಾಣ ಮಾಡುವಂತೆ ಈತ ಅಜ್ಜನನ್ನು ಪೀಡಿಸುತ್ತಿದ್ದನಂತೆ. ಆದರೆ ಶೌಚಾಲಯ ನಿರ್ಮಿಸುವಷ್ಟು ಇವರ ಬಳಿ ಹಣವಿರಲಿಲ್ಲ.

ಹಠ ಬಿಡದ ಬಾಲಕ ಓಂಕಾರ್ 2 ತಿಂಗಳ ಕಾಲ ಹಾಗೋ-ಹೀಗೋ ಹಣ ಉಳಿತಾಯ ಮಾಡಿದ್ದಾನೆ. ಅಲ್ಲದೇ ಗ್ರಾಮದ ಮುಖಂಡರ ಬಳಿ ಹೋಗಿ ತನ್ನ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ದಾನೆ. ಇದಕ್ಕೆ ಊರ ಜನರ ಸಹಕಾರವನ್ನು ಪಡೆದ ಓಂಕಾರ್ ಪ್ರಯತ್ನದಿಂದ 13 ಸಾರ್ವಜನಿಕ ಶೌಚಾಲಯಗಳು ನಿರ್ಮಾಣಗೊಂಡಿವೆ. ಜೊತೆಗೆ ಈತನ ಶಾಲೆಯಲ್ಲಿ ಹುಡುಗರಿಗೆ ಹಾಗೂ ಹುಡುಗಿಯರಿಗೆ ಪ್ರತ್ಯೇಕ ಶೌಚಾಲಯ ಕೂಡಾ ನಿರ್ಮಾಣಗೊಂಡಿದೆ. ಈ ಎಲ್ಲಾ ಮಾದರಿ ಕೆಲಸಕ್ಕೆ ಬಾಲಕ ಓಂಕಾರನಿಗೆ ಕಾರ್ಟೂನ್ ಧಾರಾವಾಹಿವೊಂದರ ಮೀನಾ ಎಂಬ ಪಾತ್ರ ಪ್ರೇರಣೆಯಂತೆ.

Write A Comment