ರಾಷ್ಟ್ರೀಯ

ಮೀಸಲಾತಿ ಹೇಳಿಕೆ; ಮೋಹನ್ ಭಾಗ್ವತ್‌ಗೆ ಸವಾಲೆಸೆದ ರಾಮ್ ಜೇಠ್ಮಲಾನಿ

Pinterest LinkedIn Tumblr

ramನವದೆಹಲಿ: ಮೀಸಲಾತಿಗೆ ಸಂಬಂಧಿಸಿದಂತೆ ಆರ್‌ಎಸ್ಎಸ್ ವರಿಷ್ಠ ಮೋಹನ್ ಭಾಗವತ್ ನೀಡಿರುವ ಹೇಳಿಕೆ ವಿರುದ್ಧ ಸವಾಲನ್ನು ಎತ್ತಿರುವ ಅಮಾನತುಗೊಂಡಿರುವ ಬಿಜೆಪಿ ಸಂಸದ ರಾಮ್ ಜೇಠ್ಮಲಾನಿ  ಬಿಹಾರ್ ಚುನಾವಣೆಯಲ್ಲಿ ಮೇಲ್ಜಾತಿಯವರನ್ನು ಸೆಳೆಯಲು ಈ ಹೇಳಿಕೆಯನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.

ದಶಕಗಳ ಹಿಂದೆ ಸುಪ್ರೀಂ ಕೋರ್ಟ್‌ನಲ್ಲಿ ಮಂಡಲ್ ಆಯೋಗದ ಪರವಾಗಿ ವಾದಿಸಲು ಬಿಹಾರ ಮತ್ತು ತಮಿಳುನಾಡು ಸರ್ಕಾರಗಳ ವಕೀಲರಾಗಿ ಕಾರ್ಯನಿರ್ವಹಿಸಿದ್ದ ಖ್ಯಾತ ವಕೀಲಾದ ಜೇಠ್ಮಲಾನಿ ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನೆತ್ತಿ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾಗವತ್ ಅವರಿಗೆ ಪತ್ರವನ್ನು ಸಹ ಬರೆದಿದ್ದಾರೆ.

ಸರ್ಕಾರ ಮೀಸಲಾತಿ ಪರಿಶೀಲನೆಗೆ ಸಂವಿಧಾನದ ತಿದ್ದುಪಡಿಗೆ ತರುವ ಸ್ಥಿತಿಯಲ್ಲಿದೆ ಎಂದು ಭಾಗವತ್ ಭಾವಿಸಿದ್ದಾರೆಯೇ  ಅಥವಾ ನಂತರ ಅದನ್ನು ಜುಮ್ಲಾ ಎಂದು ಹೇಳಿ ವಜಾ ಮಾಡಲಾಗುತ್ತದೆಯೇ ಎಂದು ಅವರು ಪತ್ರದಲ್ಲಿ ಪ್ರಶ್ನಿಸಿದ್ದಾರೆ.

ಸಾಮಾನ್ಯ ಶಾಸನವೇ ಸಂಸತ್ತಲ್ಲಿ ಪಾಸ್ ಆಗುತ್ತಿಲ್ಲದಿರುವಾಗ ಸಾಂವಿಧಾನಿಕ ತಿದ್ದುಪಡಿಯಾಗುತ್ತದೆ ಎಂದು ಭಾಗವತ್ ನಿರೀಕ್ಷಿಸಿದ್ದಾದರೂ ಹೇಗೆ ಎಂದು ಆಶ್ಚರ್ಯ ವ್ಯಕ್ತ ಪಡಿಸಿರುವ ವಕೀಲರು ಇದು ಅಕಾಲಿಕ ಸಮಯದಲ್ಲಿ ನೀಡಿದ ದುರದೃಷ್ಟಕರ ಹೇಳಿಕೆ ಎಂದಿದ್ದಾರೆ.

Write A Comment