ರಾಷ್ಟ್ರೀಯ

ವಿನಾಶದಂಚಿನಲ್ಲಿ ಇಂಡಿಯನ್ ಬಸ್ಟರ್ಡ್ ಪಕ್ಷಿ ಸಂಕುಲ

Pinterest LinkedIn Tumblr

Bustrdಜೈಸಲ್ಮೇರ್, ಸೆ.27: ಕಳೆದ ಒಂದು ವರ್ಷದಲ್ಲಿ ಇಲ್ಲಿನ ಮರುಭೂಮಿ ರಾಷ್ಟ್ರೀಯ ಉದ್ಯಾನವನ (ಡಿಎನ್‌ಪಿ) ದಲ್ಲಿ ‘ಗ್ರೇಟ್ ಇಂಡಿಯನ್ ಬಸ್ಟರ್ಡ್’ ಪಕ್ಷಿಗಳ ಸಂಖ್ಯೆಯು 103ರಿಂದ 13ಕ್ಕೆ ಇಳಿದಿದೆ ಎಂದು ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.
ಸಾಮಾನ್ಯವಾಗಿ ಗೋದಾವನ್ ಎಂದೇ ಕರೆಯಲಾಗುವ ಗ್ರೇಟ್ ಇಂಡಿಯನ್ ಬಸ್ಟರ್ಡ್ ಹಕ್ಕಿಗಳು ಕಳ್ಳಬೇಟೆ ಹಾಗೂ ಮಾನವ ಹಸ್ತಕ್ಷೇಪದಿಂದಾಗಿ ವಿನಾಶದ ಅಂಚಿಗೆ ತಲುಪಿರುವುದನ್ನು ಇತ್ತೀಚಿನ ವನ್ಯಜೀವಿ ಗಣತಿಯ ಅಂಕಿ- ಅಂಶಗಳು ತಿಳಿಸಿವೆಯೆಂದು ಅಭಯಾರಣ್ಯದ ನಿರ್ದೇಶಕ ಅನೂಪ್ ಕೆ.ಆರ್. ತಿಳಿಸಿದ್ದಾರೆ.
ಗೆಡಾವನ್ ಹಕ್ಕಿಗಳ ಸಂರಕ್ಷಣೆ ಹಾಗೂ ಸಂತಾನೋತ್ಪತ್ತಿಗಾಗಿ ಡಿಎನ್‌ಪಿ ಅಭಯಾರಣ್ಯದಲ್ಲಿ ವಿಶೇಷವಾಗಿ ನಿರ್ಮಿಸಲಾದ ಆವರಣಗಳಲ್ಲಿ ವನ್ಯಜೀವಿ ಸಂಸ್ಥೆಯ ತಜ್ಞರು, ಕಳೆದ 2-3 ತಿಂಗಳುಗಳಲ್ಲಿ ವನ್ಯಜೀವಿ ಗಣತಿಯನ್ನು ನಡೆಸಿರುವುದಾಗಿ ಅವರು ಹೇಳಿದ್ದಾರೆ.
ಗೋಡಾವನ್ ಪಕ್ಷಿಗಳ ಸಂಖ್ಯೆಯಲ್ಲಿ ವ್ಯಾಪಕ ಕುಸಿತ ಕಂಡುಬಂದಿರುವ ಹಿನ್ನೆಲೆಯಲ್ಲಿ ಕೇಂದ್ರ ಪರಿಸರ ಹಾಗೂ ಅರಣ್ಯ ಇಲಾಖೆಯು, ಅವುಗಳ ಸಂತತಿಯನ್ನು ಹೆಚ್ಚಿಸಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ದಿ ಗ್ರೇಟ್ ಇಂಡಿಯನ್ ಬಸ್ಟರ್ಡ್ ಹಾಗೂ ಬೆಂಗಾಲ್ ಫ್ಲೋರಿಕನ್ ಹಾಗೂ ಫ್ಲೋರಿಕನ್ ಎಂಬ ಮೂರು ವಿಧದ ಗೋದಾವನ್ ಪಕ್ಷಿಯ ತಳಿಗಳನ್ನು ಅದು ಅಭಿವೃದ್ಧಿಪಡಿಸುತ್ತಿದೆ.
ರಾಜಸ್ಥಾನ ಸರಕಾರವು ಈಗಾಗಲೇ ‘ಗ್ರೇಟ್ ಇಂಡಿಯನ್ ಬಸ್ಟರ್ಡ್ ಯೋಜನೆ’ಯನ್ನು ಘೋಷಿಸಿದ್ದು, ಅದನ್ನು 2013ರ ಜೂನ್‌ನಲ್ಲಿ ವನ್ಯಜೀವಿ ಸಂರಕ್ಷಣೆ ಕಾಯ್ದೆಯ ವ್ಯಾಪ್ತಿಗೆ ತಂದಿದೆ ಮತ್ತು ಈ ಅಪರೂಪದ ಪಕ್ಷಿಗಳ ಸಂರಕ್ಷಣೆ ಹಾಗೂ ವಂಶಾಭಿವೃದ್ಧಿಗಾಗಿ 12 ಕೋಟಿ ರೂ. ವೆಚ್ಚದ ಯೋಜನೆಯನ್ನು ಹಮ್ಮಿಕೊಂಡಿದೆ.

Write A Comment