ರಾಷ್ಟ್ರೀಯ

ಪ್ರಧಾನಿಯಿಂದ ರಾಷ್ಟ್ರಧ್ವಜಕ್ಕೆ ಅವಮಾನ: ಆರೋಪ

Pinterest LinkedIn Tumblr

Flagಹೊಸದಿಲ್ಲಿ, ಸೆ.25: ಪ್ರಧಾನಿ ನರೇಂದ್ರ ಮೋದಿ ಅವರು ಸಹಿ ಹಾಕಿರುವ ಭಾರತದ ರಾಷ್ಟ್ರಧ್ವಜದ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಕೋಲಾಹಲವೆದ್ದ ಬಳಿಕ ಅದನ್ನು ಖ್ಯಾತ ಬಾಣಸಿಗ ವಿಕಾಸ್ ಖನ್ನಾರಿಂದ ಹಿಂದೆ ಪಡೆಯಲಾಗಿದೆಯೆಂದು ವರದಿಯಾಗಿದೆ.
ರಾಷ್ಟ್ರಧ್ವಜದ ಮೇಲೆ ಏನನ್ನಾ ಗಲಿ ಬರೆಯುವುದು ಭಾರತೀಯ ಧ್ವಜ ಸಂಹಿತೆಯ ಉಲ್ಲಂಘನೆಯಾ ಗುತ್ತದೆಂಬುದು ಬೆಳಕಿಗೆ ಬಂದ ಬಳಿಕ ವಿದೇಶಾಂಗ ಸಚಿವಾಲಯವು ಧ್ವಜವನ್ನು ಹಿಂದಕ್ಕೆ ಪಡೆದುಕೊಂಡಿತೆಂದು ವರದಿ ತಿಳಿಸಿದೆ.
ಖ್ಯಾತ ಬಾಣಸಿಗ ವಿಕಾಸ ಖನ್ನಾ, ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮರಿಗೆ ಉಡುಗೊರೆ ನೀಡಲಿದ್ದ ಭಾರತದ ರಾಷ್ಟ್ರಧ್ವಜದ ಮೇಲೆ ಮೋದಿ ಹಸ್ತಾಕ್ಷರ ಹಾಕಿದ್ದರೆಂದು ಮುಂಜಾನೆ ವರದಿಯಾಗಿತ್ತು.
ಧ್ವಜದ ಕುರಿತು ಪ್ರತಿಕ್ರಿಯಿಸಿದ್ದ ಖನ್ನಾ, ಪ್ರಧಾನಿ ನರೇಂದ್ರ ಮೋದಿ ಈ ಧ್ವಜವನ್ನು ಅಧ್ಯಕ್ಷ ಒಬಾಮರಿಗೆ ನೀಡಿದ್ದಾರೆ. ತಾನವರನ್ನು ಭೇಟಿಯಾಗಲಿದ್ದೇನೆ ಎಂದಿದ್ದರು.
ಭಾರತೀಯ ಧ್ವಜ ಸಂಹಿತೆ-2002, ಭಾಗ-2, ಪರಿಚ್ಛೇದ-3, ವಿವರಣೆ-4- ವಿಷಯ(ಎಫ್), ಭಾರತದ ರಾಷ್ಟ್ರಧ್ವಜದ ಮೇಲೆ ಯಾವುದೇ ರೀತಿಯ ಬರವಣಿಗೆ ಮಾಡುವುದು ಧ್ವಜವನ್ನು ಅಗೌರವಿಸುವುದಕ್ಕೆ ಸಮ ಎಂದು ಸ್ಪಷ್ಟವಾಗಿ ಹೇಳಿದೆ.

Write A Comment