ರಾಷ್ಟ್ರೀಯ

ಎಟಿಎಂನಲ್ಲಿ 50 ರೂ. ಪಡೆಯುವ ಸೌಲಭ್ಯ

Pinterest LinkedIn Tumblr

Fiftyಹೊಸದಿಲ್ಲಿ, ಸೆ.25: ಎಟಿಎಂ ಮೂಲಕ 50 ರೂಪಾಯಿ ಮುಖಬೆಲೆಯ ನೋಟುಗಳನ್ನು ಪಡೆದುಕೊಳ್ಳುವ ಅವಕಾಶವನ್ನು ಸೃಷ್ಟಿಸುವಂತೆ ಎಲ್ಲ ಬ್ಯಾಂಕ್‌ಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆದೇಶ ನೀಡಿದೆ.
ಪ್ರಸ್ತುತ, ಎಟಿಎಂಗಳಿಂದ 100, 500 ಮತ್ತು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಮಾತ್ರ ಪಡೆದುಕೊಳ್ಳುವ ಅವಕಾಶವಿದೆ.
ಆರ್‌ಬಿಐನ ಈ ಆದೇಶದಿಂದಾಗಿ ಗ್ರಾಹಕರು ಕಡಿಮೆ ಮೊತ್ತದ ಹಣ ಹಾಗೂ ಮುಖಬೆಲೆಯ ನೋಟು ಗಳನ್ನು ಪಡೆದುಕೊಳ್ಳಲು ನೆರವಾಗಲಿದೆ. ಕೆಲವು ಬ್ಯಾಂಕ್‌ಗಳು ಈಗಾಗಲೇ ಈ ದಿಸೆಯಲ್ಲಿ ಕ್ರಮಕೈಗೊಂಡಿವೆ ಎಂದು ಮೂಲಗಳು ತಿಳಿಸಿವೆ.

Write A Comment