ರಾಷ್ಟ್ರೀಯ

ಹೆತ್ತವರ ಜಗಳದಲ್ಲಿ ಕೂಸು ಬಡವಾಗಕೂಡದು: ನ್ಯಾಯಾಲಯದ ತಾಕೀತು

Pinterest LinkedIn Tumblr

court_650x400_81426851307ಹೊಸದಿಲ್ಲಿ,ಸೆ.23: ಹೆತ್ತವರ ವೈವಾಹಿಕ ವಿವಾದದಲ್ಲಿ ಮಗು ನರಳಕೂಡದು. ಮಗುವಿಗೆ ಸಿಗಬೇಕಾದ ಎಲ್ಲ ಮೂಲ ಸೌಲಭ್ಯಗಳನ್ನು ಒದಗಿಸುವುದು ಹೆತ್ತವರ ಕರ್ತವ್ಯವಾಗಿದೆ ಎಂದು ಇಲ್ಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಎತ್ತಿ ಹಿಡಿದಿದೆ.

ಕೌಟುಂಬಿಕ ಹಿಂಸೆ ಪ್ರಕರಣವೊಂದರಲ್ಲಿ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಅಪ್ರಾಪ್ತ ವಯಸ್ಕ ಬಾಲಕಿಯ ತಂದೆ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿದ ನ್ಯಾ.ಪವನ ಕುಮಾರ್ ಜೈನ್ ಅವರು,ತಾಯಿ ದುಡಿಯುತ್ತಿದ್ದಾಳೆ ಎಂಬ ಮಾತ್ರಕ್ಕೆ ಮಗುವಿಗೆ ಜೀವನಾಂಶವನ್ನು ನಿರಾಕರಿಸುವಂತಿಲ್ಲ್ಲ ಎಂದು ಹೇಳಿದರು.
ಅಪ್ರಾಪ್ತ ವಯಸ್ಕ ಬಾಲಕಿಗೆ ಜೀವನಾಂಶ ಕೋರಿ ತಾಯಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯವು 25,000 ರೂ.ಮಧ್ಯಂತರ ಜೀವನಾಂಶವನ್ನು ನೀಡುವಂತೆ ತಂದೆಗೆ ಆದೇಶಿಸಿತ್ತು.
ತನ್ನ ಪರಿತ್ಯಕ್ತ ಪತ್ನಿ ದುಡಿಯುತ್ತಿದ್ದು,ಒಳ್ಳೆಯ ಸಂಬಳ ಪಡೆಯುತ್ತಿದ್ದಾಳೆ. ಮಗುವನ್ನು ಸಾಕಲು ಯಾವುದೇ ಆರ್ಥಿಕ ನೆರವು ಆಕೆಗೆ ಅಗತ್ಯವಿಲ್ಲ ಎಂಬ ಅರ್ಜಿದಾರನ ವಾದವನ್ನು ತಿರಸ್ಕರಿಸಿದ ನ್ಯಾಯಾಲಯವು,ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತು. ಇದೇ ವೇಳೆ ತಾಯಿಯ ಮಾಸಿಕ ವೇತನ 45,000 ರೂ.ನಿಂದ 49,000 ರೂ.ನಷ್ಟಿದೆ ಎನ್ನುವುದನ್ನು ಬೆಟ್ಟು ಮಾಡಿದ ಅದು, ಮಗುವಿನ ಭವಿಷ್ಯಕ್ಕಾಗಿ ಪ್ರತಿ ತಿಂಗಳು 12,000 ರೂ.ಗಳನ್ನು ಆಕೆಯ ಬ್ಯಾಂಕ್ ಖಾತೆಗೆ ಜಮಾ ಮಾಡುವಂತೆ ನಿರ್ದೇಶನ ನೀಡಿತು.

Write A Comment