ರಾಷ್ಟ್ರೀಯ

ಪೋರ್ನ್ ವೆಬ್ಸೈಟ್ ಗಳ ನಿಷೇಧಕ್ಕೆ ಪಟ್ಟು ಹಿಡಿದ ಮಹಿಳಾ ನ್ಯಾಯವಾದಿಗಳು

Pinterest LinkedIn Tumblr

Islamists porn habits

ನವದೆಹಲಿ, ಸೆ.22: ಅಂತರ್ಜಾಲದಲ್ಲಿ ಪ್ರಕಟವಾಗುವ ಎಲ್ಲಾ ರೀತಿಯ ಅಶ್ಲೀಲ ಚಿತ್ರಗಳನ್ನೂ ನಿಷೇಧಿಸಬೇಕು ಎಂದು ಆಗ್ರಹಿಸಿರುವ ಸರ್ವೋಚ್ಚ ನ್ಯಾಯಾಲಯದ ಮಹಿಳಾ ನ್ಯಾಯವಾದಿಗಳ ಸಂಘ, ಈ ವಿಷಯಕ್ಕೆ ಸಂಬಂಧಿಸಿದಂತೆ ಕಮಲೇಶ್ ವಾಸ್ವಾನಿ ಮತ್ತು ಯೂನಿಯನ್ ಆಫ್ ಇಂಡಿಯಾ ನಡುವಿನ ವಿವಾದ ಬಗೆಹರಿಸಲು ಮಧ್ಯೆ ಪ್ರವೇಶಿಸಬೇಕು ಎಂದು ಮನವಿ ಸಲ್ಲಿಸಿದೆ. ಎಲ್ಲ ರೀತಿಯ ಅಶ್ಲೀಲ ಜಾಲತಾಣಗಳು, ಅಶ್ಲೀಲ ಚಿತ್ರಗಳನ್ನು ನಿಷೇಧಿಸುವ ಕಾನೂನು ಕಾಯ್ದೆಗಳನ್ನು ಅನುಷ್ಟಾನಕ್ಕೆ ತರಬೇಕೆಂಬ ಮನವಿಯನ್ನೂ ಸಂಘ ಸರ್ವೋಚ್ಚ ನ್ಯಾಯಾಲಯದೆದುರು ಸಲ್ಲಿಸಿದೆ.

ಸಾಫ್ಟ್‌ವೇರ್ ಮೂಲಕ ಅಶ್ಲೀಲ ಚಿತ್ರಗಳನ್ನು ವಿವರಿಸುವ ವಿಧಾನವನ್ನೂ ತಡೆಯುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.

ಮಹಿಳೆಯರ ಮೇಲಿನ ಎಲ್ಲಾ ವಿಧವಾದ ದೌರ್ಜನ್ಯಗಳು ನಡೆಯುತ್ತಿರುವುದಕ್ಕೆ ಮೂಲಕಾರಣವೇ ಎಲ್ಲೆಂದರಲ್ಲಿ ಸುಲಭವಾಗಿ ಸಿಕ್ಕುವ ಅಶ್ಲೀಲ ಚಿತ್ರಗಳು. ಆದ್ದರಿಮದ ಇವುಗಳ ಮೇಲೆ ನಿಷೇಧ ಹೇರಬೇಕು ಎಂದು ಸಂಘದ ಕಾರ್ಯದರ್ಶಿ ಪಮಾಕುಮಾರಿ ಮತ್ತು ಹಿರಿಯ ನ್ಯಾಯವಾದಿ ಮಹಾಲಕ್ಷ್ಮಿ ಪಾವನಿ ಕೋರಿದ್ದಾರೆ.

Write A Comment