ಮನೋರಂಜನೆ

ಸೈನಾ– ಶಾರುಖ್ ಭೇಟಿ; ಮುಂದೇನಾಯಿತು ? ಮುಂದೆ ಓದಿ

Pinterest LinkedIn Tumblr

Shahah-sinanana

ರೋಹಿತ್‌ ಶೆಟ್ಟಿ ನಿರ್ದೇಶನ ‘ದಿಲ್‌ವಾಲೆ’ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟ ಶಾರುಖ್‌ ಅವರನ್ನು ಬ್ಯಾಡ್ಮಿಟನ್‌ ಆಟಗಾರ್ತಿ ಸೈನಾ ನೆಹ್ವಾಲ್ ಭೇಟಿ ಮಾಡಿದರು. ಸಿನಿಮಾ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯುತ್ತಿರುವುದನ್ನು ತಿಳಿದ ಸೈನಾ, ಶಾರುಖ್‌ ಅವರನ್ನು ಭೇಟಿ ಮಾಡಿ ಖುಷಿಪಟ್ಟರು.

ಸೈನಾ ಜೊತೆ ತೆಗೆಸಿಕೊಂಡಿರುವ ಫೋಟೊವನ್ನು ಶಾರುಖ್‌ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿದ್ದಾರೆ. ಅದಕ್ಕೆ ‘ಹಮ್‌ಜೋಲಿ’ ಚಿತ್ರದ ಹಾಡಿನ ‘ಡಲ್‌ಗಯಾ ದಿನ್‌ ಹೋಗಯಿ ಶ್ಯಾಮ್‌’ ಸಾಲನ್ನು ಶೀರ್ಷಿಕೆಯಾಗಿ ನೀಡಿದ್ದಾರೆ. ಈ ಹಾಡನ್ನು ಗಾಯಕರಾದ ಮೊಹಮ್ಮದ್‌ ರಫಿ ಹಾಗೂ ಆಶಾ ಭೋಂಸ್ಲೆ ಅವರು ಹಾಡಿದ್ದಾರೆ.

ಸೈನಾ ಜೊತೆ ಬ್ಯಾಡ್ಮಿಟನ್‌ ರ್‍ಯಾಕೆಟ್‌ ಹಿಡಿದು ಪೋಸ್‌ ನೀಡಿರುವ ಫೋಟೊ ಶೀರ್ಷಿಕೆ ಹೀಗಿದೆ: ‘ಡಲ್‌ ಗಯಾ ದಿನ್‌ (ಟುಕ್‌). ಹೋಗಯಿ ಶ್ಯಾಮ್‌ (ಟುಕ್‌)… ಜಾನೆ ದೋ… ಜಾನಾ ಹೈ’. ‘ಹಮ್‌ಜೋಲಿ’ ಚಿತ್ರದ ಈ ಹಾಡು ನಿಮಗೆಲ್ಲರಿಗೂ ತಿಳಿದಿದೆಯಲ್ಲವೆ. ಮೈ ಟುಕ್‌ ಟುಕ್‌ ಮೂಮೆಂಟ್‌ ವಿಥ್‌ ಸೈನಾ’.

‘ಚಿತ್ರದಲ್ಲಿ ಸೈನಾ ಹಿಡಿದಿರುವ ರ್‍ಯಾಕೆಟ್‌ನಲ್ಲಿ ತಂತುಗಳೇ ಇಲ್ಲ. ಇಂತಹ ರ್‍ಯಾಕೆಟ್‌ ಸೈನಾ ಕೈಯಲ್ಲಿ ಇದ್ದಾಗ ಮಾತ್ರ ನಾನು ಆಟದಲ್ಲಿ ಆಕೆಯನ್ನು ಸೋಲಿಸಬಹುದು. ನಿಮ್ಮ ಕುಟುಂಬ ತುಂಬಾ ಸುಂದರವಾಗಿದೆ’ ಎಂದು ಶಾರುಖ್‌ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿರುವ ಫೋಟೊದ ಪಕ್ಕದಲ್ಲಿ ಬರೆದಿದ್ದಾರೆ.

ಶಾರುಖ್‌ ಅವರು ಪ್ರಕಟಿಸಿರುವ ಚಿತ್ರವನ್ನು ಶೇರ್‌ ಮಾಡಿರುವ ಸೈನಾ, ಶಾರುಖ್‌ ಅವರಿಗೆ ಧನ್ಯವಾದ ಸಲ್ಲಿಸಿ, ‘ನಿಮ್ಮನ್ನು ಭೇಟಿ ಮಾಡಿದ್ದು ತುಂಬಾ ಖುಷಿ ಕೊಟ್ಟಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ದಿಲ್‌ವಾಲೆ’ ಸೆಟ್‌ನಲ್ಲಿ ನಟ ವರುಣ್‌ ಧವನ್‌ ಹಾಗೂ ನಟಿ ಕೃತಿಯನ್ನು ಭೇಟಿ ಮಾಡಿ ಅವರೊಂದಿಗೆ ತೆಗೆಸಿಕೊಂಡಿರುವ ಚಿತ್ರಗಳನ್ನು ಮತ್ತು ಎಲ್ಲದಕ್ಕೂ ಮೊದಲು ನಟಿ ಕಾಜೋಲ್‌ ಅವರನ್ನು ಭೇಟಿ ಮಾಡಿರುವ ಚಿತ್ರವನ್ನು ಸೈನಾ ಶೇರ್‌ ಮಾಡಿದ್ದಾರೆ. ಜತೆಗೆ ಚಿತ್ರೀಕರಣ ನೋಡಲು ಅವಕಾಶ ಕಲ್ಪಿಸಿಕೊಟ್ಟ ನಿರ್ದೇಶಕ ರೋಹಿತ್‌ ಶೆಟ್ಟಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ‘ದಿಲ್‌ವಾಲೆ’ ಚಿತ್ರ ಡಿಸೆಂಬರ್‌ 18ರಂದು ತೆರೆಕಾಣಲಿದೆ.

Write A Comment