ರಾಷ್ಟ್ರೀಯ

ಲಿಬಿಯಾದಲ್ಲಿ ಇಬ್ಬರು ಭಾರತೀಯರ ಅಪಹರಣ

Pinterest LinkedIn Tumblr

libiya-kidನವದೆಹಲಿ: ಲಿಬಿಯಾದ ತ್ರಿಪೋಲಿಯಂದ ಇಬ್ಬರು ಭಾರತೀಯರನ್ನು ಅಪಹರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಅಪಹರಣಕ್ಕೊಳಗಾದ ಭಾರತೀಯರ ಬಗ್ಗೆ ತನಿಖೆ ನಡೆಸಲು ರಾಜತಾಂತ್ರಿಕ ಮಟ್ಟದ ಮಾತುಕೆತ ನಡೆದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.

ಭಾರತೀಯರನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಿ ವಾಪಸ್ ಕರೆತರುವಲ್ಲಿ ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ಅಪಹರಣಕ್ಕೊಳಗಾದವರನ್ನು ಒಡಿಸ್ಸಾ ಮೂಲದ ಪ್ರವಶ್ ರಂಜಾನ್ ಸಮಾಲ್ ಹಾಗೂ ಆಂಧ್ರ ಪ್ರದೇಶದ ರಾಮಮೂರ್ತಿ ಕೋಸನಮ್ ಎಂದು  ಹೇಳಲಾಗಿದೆ. ಅವರು ಕೆಲಸ ಮಾಡುತ್ತಿದ್ದ ಶಿರ್ಟೆಯ ಐಬಿಎನ್- ಇ-ಸಿನಾ ಎಂಬ ಸ್ಥಳದಿಂದ ಕಿಡ್ನಾಪ್ ಮಾಡಲಾಗಿದೆ. ಆದರೆ ಯಾರು ಅಪಹರಿಸಿದ್ದಾರೆ ಎನ್ನುವ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ ಎಂದು ವಿದೇಶಾಂಗ ಸಚಿವಲಾಯ ತಿಳಿಸಿದೆ.

ಕಳೆದ ಆಗಸ್ಟ್ ನಲ್ಲಿ ನಾಲ್ವರು ಭಾರತೀಯರನ್ನು ಕಿಡ್ನಾಪ್  ಮಾಡಿ ಒತ್ತೆಯಾಳುಗಳಾಗಿರಿಸಿಕೊಳ್ಳಲಾಗಿತ್ತು. ಅದರಲ್ಲಿ ಇಬ್ಬರು ಕರ್ನಾಟಕದವರಾಗಿದ್ದರು.

Write A Comment