ರಾಷ್ಟ್ರೀಯ

ಮಹಾರಾಷ್ಟ್ರ: ಐವರು ಮಕ್ಕಳನ್ನು ಸಾಕಲಾಗದೆ ತಾಯಿಯ ಆತ್ಮಹತ್ಯೆ

Pinterest LinkedIn Tumblr

SUCIDEಅಂಬಿ ಗ್ರಾಮ, ಸೆ.7: ನಿರುದ್ಯೋಗ ಹಾಗೂ ಬಡತನದಿಂದಾಗಿ ತನ್ನ ಐವರು ಮಕ್ಕಳನ್ನು ಸಾಕಲಾಗದೆ, 40ರ ಹರೆಯದ ರೈತ ಮಹಿಳೆಯೊಬ್ಬಳು ಮೈಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡ ದಾರುಣ ಘಟನೆ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕಳೆದ ವಾರ ವ್ಯಾಪಕ ಪ್ರವಾಸ ನಡೆಸಿದ್ದ, ಮಹಾರಾಷ್ಟ್ರದ ಬರಗಾಲ ಪೀಡಿತ ಮರಾಠಾವಾಡಾ ಪ್ರದೇಶದಿಂದ ವರದಿಯಾಗಿದೆ.
ಒಂದು ಶನಿವಾರ, ದೇಶವಿಡೀ ರಕ್ಷಾಬಂಧನ ಆಚರಿಸುತ್ತಿದ್ದಾಗ, ಮನೀಷಾ ಗಟ್ಕಲ್ ಎಂಬ ಈ ನತದೃಷ್ಟ ಮಹಿಳೆ ತನ್ನ ಮಕ್ಕಳನ್ನೆಲ್ಲ ಹೊರಗೆ ಕಳುಹಿಸಿ, ಉಸ್ಮಾನಾಬಾದ್ ಜಿಲ್ಲೆಯ ಅಂಬಿ ಗ್ರಾಮದ ತನ್ನ ಮನೆಯೊಳಗೆ ಮೈ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡಿದ್ದಾಳೆ.
ಒಂದು ವಾರದ ಬಳಿಕವೂ ಆಕೆಯ ಮನೆಯಲ್ಲಿ ಸೀಮೆ ಎಣ್ಣೆಯ ವಾಸನೆ ಹೋಗಿಲ್ಲ. ಆಕೆ ಸಾಯುವಾಗ ಮನೆಯಲ್ಲಿದ್ದ ಏಕೈಕ ಆಹಾರ, ಎರಡು ಹಳಸಿದ ಚಪಾತಿಗಳು ಅಲ್ಯುಮಿನಿಯಂ ತಟ್ಟೆಯೊಂದರಲ್ಲಿ ಹಾಗೆಯೇ ಉಳಿದಿವೆ.ಮನೆಯೊಳಗಿರುವ ಎಲ್ಲ ಡಬ್ಬಗಳು ಖಾಲಿಯಾಗಿದ್ದವು. ಅಕ್ಕಿಯಾಗಲಿ, ಹಿಟ್ಟಾಗಲಿ, ಎಣ್ಣೆಯಾಗಲಿ ಅಲ್ಲಿರಲಿಲ್ಲ. ಮಕ್ಕಳಲ್ಲಿ ಕೊನೆಯದಕ್ಕೆ ಸುಮಾರು 3 ವರ್ಷ. ಅವು ಈ ಘೋರ ಆಘಾತವನ್ನು ಅರಗಿಸಿಕೊಳ್ಳಲಾಗದೆ ತಮ್ಮ ತಂದೆಯ ಸುತ್ತ ಅಳುತ್ತ ಕುಳಿತಿವೆ.
ತಾವು ನಿಜಕ್ಕೂ ತುಂಬ ಬಡವರು. ಮಳೆಯಿಲ್ಲದೆ ಬೆಳೆ ನಷ್ಟವಾಗಿದೆ. ಮನೆಯಲ್ಲಿ ಆಹಾರವೇ ಇಲ್ಲ. ತನಗೆ ಕೆಲಸವೂ ಇರಲಿಲ್ಲ. ಏನೋ ಸ್ವಲ್ಪ ಕೆಲಸ ಸಿಕ್ಕಿತೆಂದು ತಾನು
ೊರಗೆ ಹೋಗಿದ್ದೆ. ಅವಳು ಬಾಗಿಲಿಗೆ ಒಳಗಿಂದ ಚಿಲಕ ಹಾಕಿಕೊಂಡು ತನ್ನನ್ನೇ ಕೊಂದುಕೊಂಡಳು ಎಂದು ಮನೀಷಾಳ ಗಂಡ ಲಕ್ಷ್ಮಣ್ ತಿಳಿಸಿದ್ದಾರೆ. ಸಾಮಾನ್ಯವಾಗಿ ರೈತರು ಸಾಲ ತೀರಿಸಲಾಗದೆ ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ, ಈ ಘಟನೆ ಅದಕ್ಕಿಂತ ತೀರಾ ಭಿನ್ನವಾದುದು. ಗಟ್ಕಲ್ ಕುಟುಂಬಕ್ಕೆ ಸಾಲ ಪಡೆಯುವುದೂ ಸಾಧ್ಯವಿರಲಿಲ್ಲ.
ಲಕ್ಷ್ಮಣನಿಗೆ ನರೇಗಾ ಯೋಜನೆಯಲ್ಲಿ ಕೆಲಸ ಸಿಗುತ್ತಿದ್ದರೆ, ಅವರಿಗೆ ಹಣ ಸಿಗಬಹುದಿತ್ತು. ಮನೀಷಾ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ ಎಂದು ಲಕ್ಷ್ಮಣನ ಸೋದರ ಬಾಳಾಸಾಹಬ್ ಹೇಳುತ್ತಾರೆ. ಎರಡು ಜಿಲ್ಲೆಗಳ ಗಡಿಯಲ್ಲಿರುವ ಅಂಬಿ ಗ್ರಾಮದಲ್ಲಿ, ಉದ್ಯೋಗ ಖಾತ್ರಿಪಡಿಸುವ ನರೇಗಾ ಯೋಜನೆಯಂತಹ ಸರಕಾರದ ಕಾರ್ಯಕ್ರಮದಲ್ಲೂ ಕೆಲಸವಿಲ್ಲವೆಂದು ಜನರು ತಿಳಿಸುತ್ತಾರೆ. ಕಳೆದ ವಾರ ಪ್ರದೇಶಕ್ಕೆ ಭೇಟಿ ನೀಡಿದ್ದ ಫಡ್ನವೀಸ್, ತಾನು ರೈತರೊಂದಿಗೆ ನಡೆಸಿದ ಅನೇಕ ಸಭೆಗಳಲ್ಲಿ ಈ ಯೋಜನೆಗಳನ್ವಯ ಹೆಚ್ಚುವರಿ ಕೆಲಸಗಳನ್ನು ಮಂಜೂರು ಮಾಡಿದ್ದೇನೆ ಎಂದಿದ್ದರು.ವಿಪಕ್ಷಗಳು ಅವರ ಭೇಟಿಯನ್ನು ಪರಿಣಾಮ ರಹಿತವೆಂದು ಟೀಕಿಸಿದ್ದು, ಮುಖ್ಯಮಂತ್ರಿಯ ಆಶ್ವಾಸನೆಗಳು ಅಪರ್ಯಾಪ್ತ ಎಂದಿವೆ. ಮರಾಠಾವಾಡಾದಲ್ಲಿ ಸತತ ಮೂರು ವರ್ಷಗಳಿಂದ ಬರಗಾಲವಿದೆ. 2015ರಲ್ಲಿ ಅಲ್ಲಿ 628 ಮಂದಿ ರೈತರು ಆ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಪ್ರದೇಶದಲ್ಲಿ 574 ರೈತರು ಆತ್ಮಹತ್ಯೆಗೆ ಶರಣಾಗಿದ್ದರು.

Write A Comment