ರಾಷ್ಟ್ರೀಯ

ವೈರಿಗಳಿಗೆ ‘ಮುಕ್ತಿ’ಗಾಣಿಸಲು ಭಾರತ ಸಿದ್ಧ: ಸಚಿವ ರಾಥೋರ್ ಹೇಳಿಕೆ, ನಂತರ ಸ್ಪಷ್ಟನೆ

Pinterest LinkedIn Tumblr

raothodeಹೊಸದಿಲ್ಲಿ, ಸೆ.7: ಭೂಗತ ದೊರೆ ದಾವೂದ್ ಇಬ್ರಾಹೀಂ, ಲಷ್ಕರೆ ತಯ್ಯಬಾ ಸ್ಥಾಪಕ ಹಫೀಝ್ ಸಯೀದ್‌ರಂತಹ ವ್ಯಕ್ತಿಗಳು ಎಲ್ಲೇ ಇರಲಿ, ತನ್ನ ಶತ್ರುಗಳಿಗೆ ‘ಮುಕ್ತಿ’ಗಾಣಿಸಲು ಭಾರತವು ಸದಾ ಸನ್ನದ್ಧವಾಗಿರುತ್ತದೆ ಎಂದು ಕೇಂದ್ರ ಸಚಿವ ರಾಜವರ್ಧನ್ ಸಿಂಗ್ ರಾಥೋರ್ ಹೇಳಿದ್ದಾರೆ.
ಸೋಮವಾರ ಮಾಧ್ಯಮಗಳಲ್ಲಿ ಈ ಹೇಳಿಕೆ ವರದಿಯಾಗುತ್ತಿದ್ದಂತೆ, ಟ್ವಿಟರ್‌ನಲ್ಲಿ ಸ್ಪಷ್ಟೀಕರಣ ನೀಡಿದ ಅವರು, ತಮ್ಮ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದಿದ್ದಾರೆ.
‘ಹಿಂದೂಸ್ಥಾನ್ ಕಾ ದುಷ್ಮನ್ ಚಾಹೆ ಕಹೀಂ ಭಿ ಬೈಠಾ ಹೊ, ಯೆ ಗಲತ್‌ಫಾಹ್ಮಿ ಮೆ ನ ರಹೆ ಕಿ ಹಿಂದೂಸ್ಥಾನ ಉನ್ಕೆ ಖಿಲಾಫ್ ಕುಚ್ ಸೋಚ್ ನಹಿ ರಹಾ ಹೈ. ಹಮ್ ಹರ್ ವಕ್ತ್ ಅಪ್ನೆ ದುಷ್ಮನ್ ಕೊ ನ್ಯೂಟ್ರಲೈಸ್ ಕರ್ನೆ ಕೆ ಲಿಯೆ ತೈಯಾರ್ ರಹ್ತೆ ಹೇ (ಭಾರತದ ವೈರಿಗಳು, ಅವರು ಎಲ್ಲೇ ಇರಲಿ, ಭಾರತವು ಅವರ ಬಗ್ಗೆ ಯೋಚಿಸುವುದಿಲ್ಲ ಎಂಬ ತಪ್ಪು ಕಲ್ಪನೆಯಲ್ಲಿ ಯಾರೂ ಇರಬಾರದು. ನಮ್ಮ ವೈರಿಗಳಿಗೆ ಮುಕ್ತಿಗಾಣಿಸಲು ನಾವು ಸದಾ ಸನ್ನದ್ಧರಾಗಿರುತ್ತೇವೆ) ಎಂದು ರವಿವಾರ ಖಾಸಗಿ ಟಿವಿವಾಹಿನಿಯೊಂದರೊಂದಿಗೆ ಮಾತನಾಡುತ್ತ ರಾಥೋರ್ ಹೇಳಿದ್ದರು.
ಎನ್‌ಡಿಎ ಸರಕಾರವು ಅಧಿಕಾರಕ್ಕೆ ಬಂದ ನಂತರ ದಾವೂದ್ ಮತ್ತು ಸಯೀದ್ ಕುರಿತಂತೆ ಕಡತ ಸಿದ್ಧಪಡಿಸುವುದನ್ನು ಬಿಟ್ಟರೆ, ಯಾವುದೇ ಬಗೆಯ ಕ್ರಮ ಕೈಗೊಂಡಿರುವುದು ಕಾಣಿಸುತ್ತಿಲ್ಲ ಎಂದು ರಾಥೋರ್ ಅವರನ್ನು ಪ್ರಶ್ನಿಸಲಾಗಿತ್ತು. ಭಾರತವು ಇತರ ಆಯ್ಕೆಗಳನ್ನು ಬಳಸಲು ಸಿದ್ಧವಿದೆ. ‘ಸಾಮ್ ದಾನ್, ದಂಡ್, ಭೇದ್, ಸಬ್ ಚೀಜೋಂಕಾ ಇಸ್ತೆಮಾಲ್ ಹೋಗಾ. ಡೊಸ್ಸೀಯರ್ ಭಿ ದೇಂಗೆ ಔರ್ ಬಾಕಿ ಸಬ್ ಕುಚ್ ಭಿ ಹೋಗಾ’ (ಲಭ್ಯವಿರುವ ಎಲ್ಲ ಆಯ್ಕೆಗಳನ್ನು ಬಳಸಲಾಗುವುದು. ಕಡತದ ಮಾಹಿತಿಯನ್ನು ಒದಗಿಸಲಾಗುವುದು) ಎಂದು ಅವರು ಉತ್ತರ ನೀಡಿದ್ದರು.
ಇಂತಹ ದೇಶಭ್ರಷ್ಟರ ವಿರುದ್ಧ ರಹಸ್ಯ ಕಾರ್ಯಾಚರಣೆ ನಡೆಸಲಾಗುವುದೇ ಎಂದು ಪ್ರಶ್ನಿಸಿದಾಗ, ‘ಕಾರ್ಯಾಚರಣೆಯನ್ನು ನಡೆಸುವ ಸಾಧ್ಯತೆಗಳಿವೆ. ಆದರೆ, ಅದಕ್ಕೂ ಮೊದಲು ಈ ಬಗ್ಗೆ ಚರ್ಚೆ ನಡೆಸಲಾಗುವುದಿಲ್ಲ. ಅದು ಮುಕ್ತಾಯವಾದ ನಂತರ ಆ ಬಗ್ಗೆ ನಾವು ಮಾತನಾಡಬಹುದು. ರಹಸ್ಯ ಕಾರ್ಯಾಚರಣೆಯೋ ಇಲ್ಲವೇ ವಿಶೇಷ ಕಾರ್ಯಾಚರಣೆಯೇ ಎಂಬುದನ್ನು ಸರಕಾರವೇ ಹೇಳಲಿದೆ’ ಎಂದರು.

Write A Comment