ರಾಷ್ಟ್ರೀಯ

ಶೀಘ್ರದಲ್ಲೇ ಬಿಹಾರ ಅಸೆಂಬ್ಲಿ ಚುನಾವಣೆ ದಿನಾಂಕ ಪ್ರಕಟ

Pinterest LinkedIn Tumblr

vidhanಹೊಸದಿಲ್ಲಿ, ಸೆ.7: ಚುನಾವಣಾ ಆಯೋಗವು ಈ ವಾರದಲ್ಲಿ ಬಿಹಾರ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಘೋಷಿಸುವ ನಿರೀಕ್ಷೆ ಇದೆ.

243 ಸದಸ್ಯರ ಬಿಹಾರ ವಿಧಾನಸಭೆಯ ಅಧಿಕಾರಾವಧಿ ನವೆಂಬರ್ 29ಕ್ಕೆ ಮುಕ್ತಾಯವಾಗಲಿದ್ದು, ಅದಕ್ಕೆ ಮುನ್ನ ಹೊಸ ಶಾಸಕರ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಳ್ಳಬೇಕಾಗಿದೆ.
ಜೆಡಿಯು, ಆರ್‌ಜೆಡಿ, ಕಾಂಗ್ರೆಸ್ ಒಳಗೊಂಡ ಮಹಾಮೈತ್ರಿಕೂಟ ಹಾಗೂ ಬಿಜೆಪಿ ನಡುವೆ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಪೈಪೋಟಿಯ ನಿರೀಕ್ಷೆ ಇದೆ.

ಕಳೆದ ಹತ್ತು ವರ್ಷಗಳಿಂದ ಬಿಹಾರ ಮುಖ್ಯಮಂತ್ರಿಯಾಗಿ ಅಧಿಕಾರ ಚಲಾಯಿಸಿರುವ ಜೆಡಿಯುನ ನಿತೀಶ್‌ಕುಮಾರ್, ಮೂರನೆ ಅವಧಿಗೆ ಅಧಿಕಾರಗ್ರಹಣದ ನಿರೀಕ್ಷೆಯಲ್ಲಿದ್ದಾರೆ. ಈ ಹಿಂದೆ ಬಿಜೆಪಿ ನೇತೃತ್ವದ ಎನ್‌ಡಿಎ ಭಾಗವಾಗಿದ್ದ ಜೆಡಿಯು, 2013ರ ಜೂನ್‌ನಲ್ಲಿ ಅದರೊಂದಿಗಿನ ಸಂಬಂಧ ಕಡಿದುಕೊಂಡಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ಉತ್ತಮ ಸಾಧನೆ ತೋರಿಸಿರುವ ಬಿಜೆಪಿ, ರಾಂ ವಿಲಾಸ್ ಪಾಸ್ವಾನ್ ನೇತೃತ್ವದ ಲೋಕ್ ಜನಶಕ್ತಿ ಪಕ್ಷ ಮತ್ತು ಉಪೇಂದ್ರ ಕುಶ್ವಾಹ ಅವರ ಆರ್‌ಎಲ್‌ಎಸ್‌ಪಿಯೊಂದಿಗೆ ಮೈತ್ರಿಯನ್ನು ಹೊಂದಿದೆ. ಬಿಹಾರದಲ್ಲಿ ಐದು ಹಂತಗಳಲ್ಲಿ ವಿಧಾನಸಭಾ ಚುನಾವಣೆಯ ಮತದಾನ ನಡೆಯುವ ನಿರೀಕ್ಷೆ ಇದೆ.

Write A Comment