ರಾಷ್ಟ್ರೀಯ

ಮತ್ತಷ್ಟು ಸುರಕ್ಷತೆಯೊಂದಿಗೆ ಬರಲಿದೆ ರು. 1000 ನೋಟು..!

Pinterest LinkedIn Tumblr

Rs-1000-notesನವದೆಹಲಿ: ಹೆಚ್ಚುತ್ತಿರುವ ಖೋಟಾ ನೋಟು ಹಾವಳಿ, ಹಣಕಾಸು ಅಕ್ರಮ ತಡೆಯುವ ಸಲುವಾಗಿ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಹೆಚ್ಚು ಸುರಕ್ಷತಾ  ಅ೦ಶಗಳನ್ನೊಳಗೊ೦ಡ ರು.1000 ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಲು ಮು೦ದಾಗಿದೆ.

ಹೊಸ ನೋಟಿನ ಮುದ್ರಣಕ್ಕಾಗಿ ಸಿಂಗಾಪುರ ಮಾದರಿಯ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುತ್ತಿದ್ದು, ಈ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಲಾಗಿದೆ ಎಂದು  ಆರ್ ಬಿಐ ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ವಿಶೇಷ ಭದ್ರತಾ ಗುಣಗಳುಳ್ಳ ರು. 500 ಮುಖಬೆಲೆಯ ಹೊಸ ನೋಟುಗಳು ಈಗಾಗಲೇ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಇದೇ  ಮಾದರಿಯ ರು.1,000 ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ರು.1000 ಹೊಸ ನೋಟುಗಳು ಕ್ರಮ ಸ೦ಖ್ಯೆ ಆಕಾರದಲ್ಲಿರುತ್ತದೆ ಎಂದು  ತಿಳಿದುಬಂದಿದೆ.

ನೋಟಿನ ವಿಶೇಷತೆ ಏನು..?
ಹೊಸ ರು.1000 ನೋಟಿನಲ್ಲಿ ಕ್ರಮಸ೦ಖ್ಯೆಗೂ ಮೊದಲು ಭಾರತೀಯ ರುಪಾಯಿಯ ಚಿಹ್ನೆ ಇರಲಿದೆ. ಅಲ್ಲದೆ ಆ೦ಗ್ಲ ಭಾಷೆಯ “ಎಲ್’ ಅಕ್ಷರ ಇರಲಿದೆ. ಕ್ರಮಸ೦ಖ್ಯೆ ಗಾತ್ರವನ್ನು ಆರೋಹಣ  ಕ್ರಮದಲ್ಲಿ ನಮೂದಿಸಲಾಗಿರುತ್ತದೆ. ಇದರಿ೦ದ ನೋಟಿನ ಮೇಲೆ ನಕಲಿ ಸಹಿ ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಹೇಳಲಾಗುತ್ತಿದೆ.

Write A Comment