ರಾಷ್ಟ್ರೀಯ

ಪಾಕ್ ಉಗ್ರನಿಗೆ 5 ದಿನ ಪೊಲೀಸ್ ಕಸ್ಟಡಿ

Pinterest LinkedIn Tumblr

terrorಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಆ.27 ರಂದು ನಡೆದ ಸೇನಾ ಕಾರ್ಯಾಚರಣೆಯಲ್ಲಿ ಸೆರೆಸಿಕ್ಕ ಉಗ್ರನನ್ನು ಬರಾಮುಲ್ಲಾದ ಜಿಲ್ಲಾ ನ್ಯಾಯಾಲಯ 5 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಗಡಿ ನಿಯಂತ್ರಣ ರೇಖೆಯಲ್ಲಿದ್ದ ಉಗ್ರರನ್ನು ಹತ್ಯೆ ಮಾಡಿದ್ದ ಭಾರತೀಯ ಸೇನೆ, ಸಜ್ಜದ್ ಅಹಮದ್ ಅಲಿಯಾಸ್ ಅಬು ಒಬೇದುಲ್ಲಾ ಎಂಬ ಉಗ್ರನನ್ನು ಜೀವಂತವಾಗಿ ಸೆರೆ ಹಿಡಿದಿತ್ತು. ಬಂಧಿತ ಉಗ್ರನನ್ನು ಬರಾಮುಲ್ಲಾದ ನ್ಯಾಯಾಂಗ ದಂಡಾಧಿಕಾರಿ ಎದುರು ಹಾಜರುಪಡಿಸಲಾಗಿತ್ತು.

ಆ.27 ರಂದು ನಡೆದಿದ್ದ ಸೇನಾ ಕಾರ್ಯ್ಯಾಚರಣೆಯಲ್ಲಿ ಸಜ್ಜದ್ ಅಹಮದ್ ನ ಸಹಚರರನ್ನು ಹತ್ಯೆ ಮಾಡಲಾಗಿತ್ತು.  ಜಮ್ಮು-ಕಾಶ್ಮೀರದಲ್ಲಿ ಇತ್ತೀಚೆಗಷ್ಟೆ ನಾವೇದ್ ಎಂಬ ಉಗ್ರನನ್ನು ಸೆರೆಹಿಡಿಯಲಾಗಿತ್ತು. ಇದಾದ ಮೂರು ವಾರಗಳ ಬಳಿಕ ಮತ್ತೋರ್ವ ಉಗ್ರನನ್ನು ಬಂಧಿಸಲಾಗಿದೆ.

Write A Comment