ಮಹಿಳೆಯೊಬ್ಬಳು ಸ್ನಾನ ಮಾಡುತ್ತಿರುವ ವಿಡಿಯೋ ತೆಗೆದು ಪರಾರಿಯಾಗಿದ್ದ ಕಾಮುಕ ವ್ಯಕ್ತಿಯೊಬ್ಬ ಜೈಲು ಪಾಲಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಕಾಸರಗೋಡು ಉಪ್ಪಳದ ನಿಸಾರ್ ಎಂಬ 21 ವರ್ಷದ ಕಾಮುಕ ಯುವಕ ತನ್ನ ಚಿಕ್ಕಪ್ಪನ ಮನೆಗೆ ಬಂದಿದ್ದ ಸಂಮಯದಲ್ಲಿ ಪಕ್ಕದ ಮನೆಯಲ್ಲಿನ ಮಹಿಳೆಯೊಬ್ಬಳು ಸ್ನಾನ ಮಾಡುತ್ತಿರುವ ಸಮಯದಲ್ಲಿ ವಿಡಿಯೋ ತೆಗೆಯುತ್ತಿದ್ದ. ಇದನ್ನು ಗಮನಿಸಿದ ಮಹಿಳೆ ಕೂಗಿ ಕೊಂಡಿದ್ದು ತಕ್ಷಣ ಅಲ್ಲಿಂದ ಪರಾರಿಯಾಗಿದ್ದ.
ಈ ಕುರಿತು 2013 ಫೆಬ್ರವರಿ 13 ರಂದು ಪ್ರಕರಣ ದಾಖಲಾಗಿತ್ತಲ್ಲ ದೇ ನ್ಯಾಯಾಲಯದ ಮೇಟ್ಟಿಲೇರಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ೧೦ ಸಾವಿರ ರೂಪಾಯಿ ದಂಡ ಒಂದು ವರ್ಷ ಜೈಲು ಶಿಕ್ಷೆ ಹಾಗೂ ದಂಡ ಕಟ್ಟಲು ತಪ್ಪಿದಲ್ಲಿ ಹೆಚ್ಯ್ಚುವರಿ ಆರು ತಿಂಗಳ ಸಜೆ ವಿಧಿಸಿ ಆದೇಶ ಹೊರಡಿಸಿದೆ.