ರಾಷ್ಟ್ರೀಯ

ರಾಹುಲ್ ಗಾಂಧಿಗೆ ಚೀಟಿ ಇಟ್ಟುಕೊಳ್ಳದೇ ಎರಡು ನಿಮಿಷವೂ ಮಾತನಾಡುವುದಕ್ಕೆ ಬರುವುದಿಲ್ಲ: ಸ್ಮೃತಿ ಇರಾನಿ

Pinterest LinkedIn Tumblr

collage2_2_0_0_0_0

ಅಮೇಥಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಸೂಟು ಬೂಟಿನ ಸರ್ಕಾರದ ಟೀಕೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ವ್ಯಂಗ್ಯ ಧಾಟಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಎನ್.ಡಿ.ಎ ಸರ್ಕಾರವನ್ನು ಸೂಟು ಬೂಟಿನ ಸರ್ಕಾರ ಎಂದು ಟೀಕಿಸುವ ರಾಹುಲ್ ಗಾಂಧಿಗೆ ಚೀಟಿ ಇಟ್ಟುಕೊಳ್ಳದೇ ಎರಡು ನಿಮಿಷವೂ ಮಾತನಾಡುವುದಕ್ಕೆ ಬರುವುದಿಲ್ಲ ಎಂದಿದ್ದಾರೆ.

ಸಂಸತ್ ನಲ್ಲಿ ಒಂದು ವರೆ ಗಂಟೆ ಭಾಷಣ ಮಾಡುವುದಕ್ಕಿಂತಲೂ ಸೂಟ್ ಬೂಟ್ ಕಿ ಸರ್ಕಾರ್ ಎಂದು ಒಂದು ವರೆ ನಿಮಿಷ ಟೀಕೆ ಮಾಡುವುದು ಸುಲಭದ ವಿಷಯ, ಎಂದು ಸ್ಮೃತಿ ಇರಾನಿ ಹೇಳಿದ್ದಾರೆ. ರಾಹುಲ್ ಗಾಂಧಿ ತಾವು ಮಾಡಿದ್ದ ಕೇವಲ 2 ನಿಮಿಷದ ಭಾಷಣಕ್ಕೂ ಚೀಟಿ ತಂದಿದ್ದರು, ಚೀಟಿ ತರದೇ ಅವರಿಗೆ ಎರಡು ನಿಮಿಷವೂ ಭಾಷಣ ಮಾಡಲು ಸಾಧ್ಯವಿಲ್ಲ ಎಂದು ಸ್ಮೃತಿ ಇರಾನಿ ಟಿಕಾಪ್ರಹಾರ ನಡೆಸಿದ್ದಾರೆ.

ಏಪ್ರಿಲ್ ನಲ್ಲಿ ನಡೆದಿದ್ದ ಸಂಸತ್ ಅಧಿವೇಶನದಲ್ಲಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿ ಮೋದಿ ಸರ್ಕಾರವನ್ನು ಸೂಟು ಬೂಟಿನ ಸರ್ಕಾರ ಎಂದು ತೀಕಿಸಿದ್ದರು.

Write A Comment