ಮಂಗಳೂರು, ಆ.23 ದುಬೈಯ ಬ್ಯಾರೀಸ್ ಕಲ್ಚರಲ್ ಫೋರಂ (ಬಿಸಿಎ್) ವತಿಯಿಂದ 600ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಮತ್ತು ಸುಮಾರು 60 ವಿಕಲಚೇತನರಿಗೆ ಉಚಿತ ಗಾಲಿಕುರ್ಚಿ ವಿತರಣೆ ಸಮಾರಂಭ ರವಿವಾರ ನಗರದ ಸೈಂಟ್ ಅಲೋಶಿಯಸ್ ಕಾಲೇಜಿನ ಲೊಯೊಲಾ ಸಭಾಂಗಣದಲ್ಲಿ ಜರಗಿತ್ತು. ಆರ್ಥಿಕವಾಗಿ ಹಿಂದುಳಿದಿರುವ ಕೌಟುಂಬಿಕ ಹಿನ್ನಲೆಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ದುಬ್ಯಾನ ಬ್ಯಾರೀಸ್ ಕಲ್ಚರಲ್ ಫೋರಂ (ಬಿಸಿಎಫ್) ಕಳೆದ ಹದಿಮೂರು ವರ್ಷಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಾ ಬಂದಿದೆ.
ಅಲ್‌ಹಾಜ್ ಕೆ.ಎಸ್. ಆಟಕೋಯ ತಂಙಳ್‌ರವರು ದುಅ ನೆರವೇರಿಸಿದರು. ಆರೋಗ್ಯ ಸಚಿವ ಯು.ಟಿ. ಖಾದರ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.ಬಿಸಿಎಫ್ ಅಧ್ಯಕ್ಷ ಡಾ.ಬಿ.ಕೆ ಯೂಸುಫ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಹಸನ್‌ದರ್‌ವೇಶ್, ಚೆಯರ್‌ಮ್ಯಾನ್ ದರ್‌ವೇಶ್ ಗ್ರೂಪ್ ಯುಎಇ ,ಫಿಝ್ಝಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಬಿ.ಎಂ. ಫಾರೂಕ್ ಹಾಗೂ ಬ್ಯಾರೀಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಸೈಯ್ಯದ್ ಬ್ಯಾರಿರವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬಿ.ರಮಾನಾಥರೈ, ಅರಣ್ಯ ಹಾಗೂ ಪರಿಸರ ಸಚಿವರು ಕರ್ನಾಟಕ ಸರಕಾರ. ವಿನಯಕುಮಾರ್ ಸೊರಕೆ ನಗರಾಭಿವೃದ್ಧಿ ಸಚಿವರು ಕರ್ನಾಟಕ ಸರಕಾರ, ಮಂಗಳೂರು ಲೋಕಸಭಾ ಸದಸ್ಯರಾದ ನಳಿನ್ ಕುಮಾರ್‌ಕಟೀಲ್, ಮೊದೀನ್ ಬಾವ ಶಾಸಕರು ಮಂಗಳೂರು ಉತ್ತರ ವಲಯ, ಜೆ.ಆರ್ ಲೋಬೊ, ಶಾಸಕರು ಮಂಗಳೂರು ದಕ್ಷಿಣ ವಲಯ, ಕ್ಯಾ. ಗಣೇಶ್ ಕಾರ್ಣಿಕ್ ಎಮ್‌ಎಲ್‌ಸಿ ಕರ್ನಾಟಕ ಸರಕಾರ, ಐವನ್ ಡಿ ಸೋಜಾ ಎಮ್‌ಎಲ್‌ಸಿ ಕರ್ನಾಟಕ ಸರಕಾರ, ಎ.ಬಿ. ಇಬ್ರಾಹಿಂ ಜಿಲ್ಲಾಧಿಕಾರಿ ದ.ಕ. ಜಿಲ್ಲೆ, ಡಾ. ಎಮ್. ವಿಜಯಕುಮಾರ್ ಉಪಕುಲಪತಿಗಳು ಯೆನೆಪೋಯ ಯುನಿವರ್ಸಿಟಿ, ಡಾ. ತುಂಬೆ ಮೊಯ್ದಿನ್, ಅಧ್ಯಕ್ಷರು ಗಲ್ಫ್ ಮೆಡಿಕಲ್ ಯುನಿವರ್ಸಿಟಿ, ಝಕರಿಯಾ ಜೋಕಟ್ಟೆ ಮುಝೈನ್‌ಗ್ರೂಪ್ ಸೌದಿ ಅರೇಬಿಯಾ, ಎಸ್.ಎಮ್. ಶರೀಫ್, ಖುಶಿ ಗ್ರೂಪ್‌ದುಬಾ, ಬಿ.ಎ. ಮೊದಿನ್ ಮಾಜಿ ಶಿಕ್ಷಣ ಸಚಿವರು ಕರ್ನಾಟಕ ಸರಕಾರ, ಇಬ್ರಾಹಿಮ್ ಕೋಡಿಜಾಲ್ ಮೂಡಾ ಅಧ್ಯಕ್ಷರು, ಎಸ್.ಎಮ್.ರಶೀದ್ ಜಿಲ್ಲಾ ವಕ್ಫ್‌ಅಧ್ಯಕ್ಷರು, ಬಿ.ಮೊಹಮ್ಮದ್ ಹನೀಫ್ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು, ಅಬ್ದುಸ್ಸಲಾಮ್ ಪುತ್ತಿಗೆ, ಕೆ ಮೊಹಮ್ಮದ್ ಹಾರಿಸ್, ಅಬ್ದುಲ್‌ರವೂಫ್ ಪುತ್ತಿಗೆ, ಹಮೀದ್‌ಕಂದಕ್, ಮೊಹಮ್ಮದ್ ಬ್ಯಾರಿ, ಅಬೂಬಕ್ಕರ್ ಸಜಿಪ, ಎಮ್.ಬಿ. ನೂರ್ ಮುಹಮ್ಮದ್ ಮುಲ್ಕಿ ಮುಂತಾದವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಜ| ಹಸನ್‌ದರ್‌ವೇಶ್ ಮತ್ತು ಎಸ್ ಎಂ ಶರೀಫ್ ಖುಶಿ ಗ್ರೂಪ್‌ರವರಿಗೆ ಸಿಎಸ್‌ಆರ್ ವಿಶೇಷ ಪ್ರಶಸ್ತಿ ಹಾಗೂ ಕೆ.ಎಸ್. ಸಯೀದ್ ಕರ್ನಿರೆರವರಿಗೆ ಸ್ಟಾರ್‍ಸ್‌ಆಫ್ ಬ್ಯಾರೀಸ್ 2015 ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು .ಪಿಯುಸಿ ಯ ಮೂರು ವಿಭಾಗಗಳಲ್ಲಿ ಜಿಲ್ಲೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಕ್ರೀಡಾಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದ ಇಬ್ಬರು ಕ್ರೀಡಾಪಟುಗಳನ್ನು ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 60 ಅಂಗವಿಕಲ ವ್ಯಕ್ತಿಗಳಿಗೆ ಗಾಲಿ ಕುರ್ಚಿಗಳನ್ನು ಉಚಿತವಾಗಿ ವಿತರಿಸಲಾಯಿತ್ತು.
ವೃತ್ತಿ ಮಾರ್ಗದರ್ಶನ ಕಾರ್ಯಾಗಾರ :
ಬೆಳಗ್ಗೆ 9ರಿಂದ ಮಧ್ಯಾಹ್ನ 12:30ರ ತನಕ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ (Career Guidence Symposium) ನಡೆಯಿತ್ತು. ಈ ಕಾರ್ಯಕ್ರಮವನ್ನು ಯುಎಇ ಲಂಡನ್ ಅಮೇರಿಕನ್ ಸಿಟಿಕಾಲೇಜಿನ ನಿರ್ದೇಶಕರಾದ ಡಾ.ಪ್ರೊ. ಕಾಪು ಮೊಹಮ್ಮದ್ ನಡೆಸಿ ಕೊಟ್ಟರು, ಅಲ್ಪಸಂಖ್ಯಾತರಿಗೆ ದೊರಕುವ ಸ್ಕಾಲರ್‌ಶಿಪ್ ಬಗ್ಗೆ ಮಂಗಳೂರು ಟ್ಯಾಲೆಂಟ್‌ರಿಸರ್ಚ್ ಫೌಂಡೇಶನ್‌ನ ಅಧ್ಯಕ್ಷ ರಿಯಾಝ್ ಅಹಮ್ಮದ್ ಮಾಹಿತಿ ನೀಡಿದರು.
ಬಿಸಿಎಫ್ ಸ್ಕಾಲರ್‌ಶಿಫ್ ಕಮಿಟಿ, ದುಬ್ಯಾ ಇದರ ಅಧ್ಯಕ್ಷ ಉಸ್ಮಾನ್ ಮೂಳೂರು, ಬ್ಯಾರೀಸ್‌ಕಲ್ಚರಲ್ ಫೋರಂ, ದುಬ್ಯಾ ಇದರ ಉಪಾಧ್ಯಕ್ಷ ಎಮ್. ಇ. ಮೂಳೂರು, ಫೋರಂನ ಪೋಷಕರಾದ ಬಿ.ಎಂ. ಮಮ್ತಾಝ್ ಅಲಿ, ಕಾರ್ಯಕ್ರಮಸಂಯೋಜಕ ಬಿ.ಎ. ನಝೀರ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಿಸಿಎಫ್‌ನಿಂದ25 ಲಕ್ಷ ರೂ. ವೆಚ್ಚದಲ್ಲಿ 650 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮತ್ತು 4.5 ಲಕ್ಷ ರೂ. ವೆಚ್ಚದಲ್ಲಿ 63 ವಿಕಲಚೇತನರಿಗೆ ಉಚಿತ ಗಾಲಿಕುರ್ಚಿಗಳ ವಿತರಣೆ (Updated News)
ದುಬೈಯ ಬ್ಯಾರೀಸ್ ಕಲ್ಚರಲ್ ಫೋರಂ (ಬಿಸಿಎಫ್) ವತಿಯಿಂದ 25 ಲಕ್ಷ ರೂ. ವೆಚ್ಚದಲ್ಲಿ 650 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮತ್ತು 4.5 ಲಕ್ಷ ರೂ. ವೆಚ್ಚದಲ್ಲಿ 63 ವಿಕಲಚೇತನರಿಗೆ ಉಚಿತ ಗಾಲಿಕುರ್ಚಿಗಳ ವಿತರಣೆ ಸಮಾರಂಭವು ರವಿವಾರ ನಗರದ ಸಂತ ಅಲೋಶಿಯಸ್ ಕಾಲೇಜಿ ಲೊಯೊಲಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆರೋಗ್ಯ ಸಚಿವ ಯು.ಟಿ.ಖಾದರ್, ವಿದ್ಯಾರ್ಥಿ ವೇತನವನ್ನು ಪಡೆದ ವಿದ್ಯಾರ್ಥಿ ಗಳು ಉನ್ನತ ಶಿಕ್ಷಣವನ್ನು ಪಡೆದು ಹೆತ್ತವರು ಅಭಿಮಾನಪಡುವಂತೆ ಸ್ವಾಭಿಮಾನಿಗಳಾಗಿ ನೆಮ್ಮದಿಯ ಜೀವನ ಸಾಗಿಸುವಂತಾಗಬೇಕು. ಈ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯ ಜೊತೆಗೆ ಭಾವನಾತ್ಮಕ ವೌಲ್ಯಗಳನ್ನು ಬೆಳೆಸಿ ಕೊಂಡು ಸಮಾಜಕ್ಕೆ ಸಹಕಾರಿಯಾಗುವ, ಉತ್ತಮ ನಾಗರಿಕರಾಗಿ ರೂಪುಗೊಳ್ಳಲಿ ಎಂದು ಹಾರೈಸಿದರು.
ಅರಣ್ಯ ಸಚಿವ ಬಿ.ರಮಾನಾಥ ರೈ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಅನುಕೂಲ ವಾಗುವಂತೆ ಬಿಸಿಎಫ್ ವಿದ್ಯಾರ್ಥಿ ವೇತನ ನೀಡುತ್ತಿರು ವುದು ಶ್ಲಾಘನೀಯ. ಈ ಮಹತ್ವದ ಕೆಲಸ ವನ್ನು ಇನ್ನು ಮುಂದೆಯೂ ನಿರ್ವಹಿಸಲಿ ಎಂದು ಶುಭ ಕೋರಿದರು.
ದುಬೈಯ ದರ್‌ವೇಶ್ ಸಮೂಹದ ಅಧ್ಯಕ್ಷ ಹಾಗೂ ಬಿಸಿಎಫ್ ಯುಎಇ ರಾಯ ಭಾರಿ ಹಸನ್ ದರ್‌ವೇಶ್ ಮಾತನಾಡಿ, ಆರೋಗ್ಯವಂತ ಸಮಾಜಕ್ಕಾಗಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮೂಲಕ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಬಿಸಿಎಫ್ ಇಂತಹ ಕಾರ್ಯಗಳನ್ನು ಕೈಗೊಂಡಿದೆ. ಈ ಕೆಲಸ ಮುಂದುವರಿದು ಸಮಾಜದ ಇನ್ನಷ್ಟು ಜನರಿಗೆ ಸಹಾಯವಾಗುವಂತಾಗಲಿ ಎಂದರು.
ಶಾಸಕ ಜೆ.ಆರ್.ಲೋಬೊ ಮಾತನಾಡಿ, ಅನಿವಾಸಿ ಭಾರತೀಯರಾಗಿದ್ದುಕೊಂಡು ತಾಯ್ನ ಡನ್ನು ಮರೆಯದೆ ಸಹಾಯಹಸ್ತ ನೀಡುತ್ತಿರುವುದು ಅಭಿನಂದನೀಯ ಎಂದರು.
ಇನ್ನೋರ್ವ ಅತಿಥಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ತಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ವಿದ್ಯಾರ್ಥಿಗಳಿಗೆ ಹಾಗೂ ಸಮಾಜದ ದುರ್ಬಲ ವರ್ಗದವರಿಗೆ ನೆರವು ನೀಡಲು ವೆಚ್ಚ ಮಾಡುತ್ತಿರುವ ಬಿಸಿಎಫ್ ತಂಡದ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಿಸಿಎಫ್‌ನ ಅಧ್ಯಕ್ಷ ಡಾ.ಬಿ.ಕೆ.ಯೂಸುಫ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಮೊಯ್ದಿನ್ ಬಾವ, ಐವನ್ ಡಿಸೋಜ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಫಿಝಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಬಿ.ಎಂ.ಾರೂಕ್, ಬ್ಯಾರೀಸ್ ಗ್ರೂಪ್‌ನ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ, ಯೆನೆಪೊಯ ವಿವಿ ಉಪಕುಲಪತಿ ಡಾ.ಎಂ.ವಿಜಯಕುಮಾರ್, ಅನಿವಾಸಿ ಉದ್ಯಮಿಗಳಾದ ಝಕರಿಯಾ ಜೋಕಟ್ಟೆ, ಎಸ್.ಎಂ.ಶರ್ೀ, ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನ್ೀ, ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ, ಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಹಮೀದ್ ಕಂದಕ್, ಮಂಗಳೂರು ಎಜುಕೇಶನ್ ಇನ್ಸ್ ಟಿಟ್ಯೂಟ್ ಫೆಡರೇಶನ್‌ನ ಮುಹಮ್ಮದ್ ಬ್ಯಾರಿ, ಮುಕ್ಕ ಸೀ ಫುಡ್ ಇಂಡಸ್ಟ್ರೀಸ್‌ನ ಕೆ.ಮುಹಮ್ಮದ್ ಹಾರಿಸ್, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಅಬೂಬಕರ್ ಸಜಿಪ, ಕರ್ನಾಟಕ ಇಂಡಸ್ಟ್ರಿಯಲ್ ಬ್ಯಾಂಕ್‌ನ ಮಾಜಿ ನಿರ್ದೇಶಕ ಎಂ.ಬಿ.ನೂರ್ ಮುಹಮ್ಮದ್ ಮುಲ್ಕಿ ಮತ್ತಿತರರು ಉಪಸ್ಥಿತರಿದ್ದರು.
ಸ್ಕಾಲರ್‌ಶಿಪ್ ಕಮಿಟಿಯ ಅಧ್ಯಕ್ಷ ಉಸ್ಮಾನ್ ಮೂಳೂರು ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ನೀಡಿದರು. ಬಿಸಿಎಫ್ ಉಪಾಧ್ಯಕ್ಷ ಎಂ.ಇ. ಮೂಳೂರು ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 13 ವರ್ಷಗಳಿಂದ ಉಡುಪಿ ಹಾಗೂ ದ.ಕ. ಜಿಲ್ಲೆಯ ಪಿಯುಸಿಯಿಂದ ಸ್ನಾತಕೋತ್ತರ ಪದವಿ ತನಕದ ವಿವಿಧ 23 ಕೋರ್ಸ್‌ಗಳಿಗೆ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿ ಗಳಿಗೆ ವಿದ್ಯಾರ್ಥಿವೇತನ ನೀಡುತ್ತಾ ಬಂದಿದ್ದು, ಈ ಬಾರಿ ವಿಕಲಚೇತನರಿಗೆ ಉಚಿತ ಗಾಲಿಕುರ್ಚಿಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಈ ಸಂದರ್ಭದಲ್ಲಿ ಹಸನ್ ದರ್‌ವೇಶ್ ಮತ್ತು ಎಸ್.ಎಂ.ಶರ್ೀಗೆ ಸಿಎಸ್‌ಆರ್ ವಿಶೇಷ ಪ್ರಶಸ್ತಿ, ಕೆ.ಎಸ್. ಸಯೀದ್ ಕರ್ನಿರೆ ಅವರಿಗೆ ‘ಸ್ಟಾರ್ ಆ್ ಬ್ಯಾರೀಸ್- 2015’ ಪ್ರಶಸ್ತಿ ಹಾಗೂ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ಗೆ ‘ಬೆಸ್ಟ್ ಬ್ಯಾರೀಸ್ ಆರ್ಗನೈಝೇಶನ್ -2015’ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಪಿಯುಸಿಯ ವಾಣಿಜ್ಯ, ಕಲಾ ಹಾಗೂ ವಿಜ್ಞಾನ ವಿಭಾಗಗಳಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿರುವ ಸಾಧಕ 9 ವಿದ್ಯಾರ್ಥಿಗಳನ್ನು ಮತ್ತು ಕ್ರೀಡಾ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ ಇಬ್ಬರು ಕ್ರೀಡಾಪಟುಗಳನ್ನು ಈ ಸಂದರ್ಭ ಅಭಿ ನಂದಿಸಲಾಯಿತು.
ಕೆರಿಯರ್ ಗೈಡೆನ್ಸ್ ಕಾರ್ಯಕ್ರಮ
ಈ ಕಾರ್ಯಕ್ರಮಕ್ಕೆ ಮೊದಲು ಯುಎಇ ಲಂಡನ್ ಅಮೆರಿಕನ್ ಸಿಟಿ ಕಾಲೇಜಿನ ನಿರ್ದೇಶಕ ಡಾ.ಕಾಪು ಮುಹಮ್ಮದ್‌ರವರು ವಿದ್ಯಾರ್ಥಿಗಳಿಗೆ ಕೆರಿಯರ್ ಗೈಡೆನ್ಸ್ ಕಾರ್ಯಕ್ರಮ ನಡೆಸಿಕೊಟ್ಟರು.
ದ.ಕ. ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ‘ವಾರ್ತಾಭಾರತಿ’ ದೈನಿಕದ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ, ಉಸ್ಮಾನ್ ಮೂಳೂರು ಮುಂತಾದವರು ಉಪಸ್ಥಿತರಿದ್ದರು.
ಬಿಸಿಎಫ್‌ನ ಪೋಷಕ ಬಿ.ಎಂ.ಮುಮ್ತಾಝ್ ಅಲಿ ಸ್ವಾಗತಿಸಿದರು. ಉಪಾಧ್ಯಕ್ಷ ಅಬ್ದುಲ್ಲತೀಫ್ ಮುಲ್ಕಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಡಾ.ಕಾಪು ಮುಹಮ್ಮದ್, ಟ್ಯಾಲೆಂಟ್ ಫೌಂಡೇಶನ್‌ನ ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಪಂಪ್‌ವೆಲ್ ಮಸ್ಜಿದುತ್ತಕ್ವಾದ ವೌಲಾನ ಇಬ್ರಾಹೀಂ ದುಆ ನೆರವೇರಿಸಿದರು. ಶಾಕಿಬ್ ಉಸ್ಮಾನ್ ಮೂಳೂರು ಕಿರಾಅತ್ ಪಠಿಸಿದರು.