ರಾಷ್ಟ್ರೀಯ

‘ಪಾಕ್‌ ಮಾತುಕತೆ ಕೈಬಿಟ್ಟಿದ್ದು ದುರದೃಷ್ಟಕರ’: ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಕಳವಳ

Pinterest LinkedIn Tumblr

RAJNATH

ಲಖನೌ (ಪಿಟಿಐ): ಭಾರತ ಮತ್ತು ಪಾಕಿಸ್ತಾನ ಭದ್ರತಾ ಸಲಹೆಗಾರರ ನಡುವಿನ ಸಭೆಯನ್ನು ಪಾಕಿಸ್ತಾನ ರದ್ದುಗೊಳಿಸಿದ್ದು ದುರದೃಷ್ಟಕರ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ತಿಳಿಸಿದ್ದಾರೆ.

ಲಖನೌ ಸಂಸ್ಕೃತ ವಿದ್ಯಾಪೀಠ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಮಾತನಾಡಿದ ಅವರು, ಮಾತುಕತೆ ಕೈಬಿಟ್ಟಿದ್ದು ಪಾಕಿಸ್ತಾನವೇ ಹೊರತು ಭಾರತವಲ್ಲ. ಮಾತುಕತೆಗೆ ಭಾರತ ಸದಾ ಸಿದ್ಧವಿದೆ ಎಂದಿದ್ದಾರೆ.

ಪಾಕಿಸ್ತಾನ ಭದ್ರತಾ ಸಲಹೆಗಾರ ಸರ್ತಾಜ್‌ ಅಜೀಜ್‌ ಅವರನ್ನು ಕಾಶ್ಮೀರ ಪ್ರತ್ಯೇಕತಾವಾದಿಗಳು ಭೇಟಿಯಾಗುವುದನ್ನು ಭಾರತ ವಿರೋಧಿಸಿತ್ತು. ಭಾರತದ ಈ ಕ್ರಮಕ್ಕೆ ಪಾಕಿಸ್ತಾನ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಉಭಯ ರಾಷ್ಟ್ರಗಳ ಭದ್ರತಾ ಸಲಹೆಗಾರರ ನಡುವಿನ ಸಭೆಯ ವೇಳೆ ಮೂರನೆಯವರ ಮಧ್ಯ ಪ್ರವೇಶ ಅಗತ್ಯವಿರಲಿಲ್ಲ’ ಎಂದು ಹೇಳಿದ್ದಾರೆ.

ಎರಡೂ ರಾಷ್ಟ್ರಗಳ ನಡುವಿನ ಶಾಂತಿ ಮಾತುಕತೆಗೆ ಭಾರತ ಸದಾ ಸಿದ್ಧವಿದೆ. ಈ ವಿಚಾರದಲ್ಲಿ ಯಾವುದೇ ಗೊಂದಲ ಭಾರತಕ್ಕಿಲ್ಲ ಎಂದು ಅವರು ತಿಳಿಸಿದ್ದಾರೆ.

Write A Comment