ನವದೆಹಲಿ (ಐಎಎನ್‌ಎಸ್): ‘ಒಂದು ಶ್ರೇಣಿ ಒಂದು ಪಿಂಚಣಿ’ (ಒಆರ್‌ಒಪಿ) ಯೋಜನೆ ಜಾರಿಗೆ ಒತ್ತಾಯಿಸಿ ಮಾಜಿ ಸೈನಿಕರು ನಡೆಸುತ್ತಿರುವ ಪ್ರತಿಭಟನೆಗೆ ವಿದೇಶಾಂಗ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ವಿ.ಕೆ. ಸಿಂಗ್ ಪುತ್ರಿ ಮೃಣಾಲಿನಿ ಸಿಂಗ್ ಬೆಂಬಲ ಸೂಚಿಸಿದ್ದಾರೆ.
ಮಾಜಿ ಸೈನಿಕರು ಜಂತರ್ ಮಂತರ್‌ನಲ್ಲಿ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭಾನುವಾರ ಭೇಟಿ ನೀಡಿ, ಪ್ರತಿಭಟನೆಯಲ್ಲಿ ಭಾಗವಹಿಸಿದ ಅವರು, ಸರ್ಕಾರ ಆದಷ್ಟು ಬೇಗ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
‘ನಾನೂ ಒಬ್ಬ ಮಾಜಿ ಸೈನಿಕರ ಮಗಳು. ನನ್ನ ತಾತ ಕೂಡಾ ಒಬ್ಬ ಸೈನಿಕರಾಗಿದ್ದರು. ನನ್ನ ಮಗನೂ ಸೈನಿಕನಾಗಬಹುದು. ಒಆರ್‌ಒಪಿ ಯೋಜನೆ ಆದಷ್ಟು ಬೇಗ ಜಾರಿಯಾಗಬೇಕು. ಸರ್ಕಾರ ಮಾಜಿ ಸಚಿವರ ಬೇಡಿಕೆಗೆ ಆದಷ್ಟು ಬೇಗ ಸ್ಪಂದಿಸುವ ವಿಶ್ವಾಸವಿದೆ’ ಎಂದು ಮೃಣಾಲಿನಿ ತಿಳಿಸಿದ್ದಾರೆ.
