ರಾಷ್ಟ್ರೀಯ

ಬೆಚ್ಚಿ ಬೀಳಿಸುವ ಸುದ್ದಿ :ಗೆಳತಿಯ ಅತ್ಯಾಚಾರಕ್ಕೆ ಸುಪಾರಿ ಕೊಟ್ಟ ಬಾಲಕಿಯರು !

Pinterest LinkedIn Tumblr

RAPPಉತ್ತರ ಪ್ರದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೊಸತೇನಲ್ಲ. ಆದರೆ ಮೂವರು ಬಾಲಕಿಯರು ತಮ್ಮ ಸ್ನೇಹಿತೆಯನ್ನೇ ಕಾಮುಕರಿಂದ ಅತ್ಯಾಚಾರ ಮಾಡಿಸಿ ‘ಲೈವ್ ಶೋ’ವೀಕ್ಷಿಸಿದ ಆಘಾತಕಾರಿ ಘಟನೆಯೊಂದು ನಡೆದಿದೆ.

ಹೌದು. ಉತ್ತರಪ್ರದೇಶದ ಲಖನೌನಲ್ಲಿ ಗುರುವಾರ ಹಾಡುಹಗಲೇ ಈ ಘಟನೆ ನಡೆದಿದ್ದು ಎಂಟನೇ ತರಗತಿ ಓದುತ್ತಿರುವ 14 ವರ್ಷದ ಬಾಲಕಿಯನ್ನು ಆಕೆಯ ಗೆಳತಿಯರ ಸಲಹೆಯಂತೆ ಮಧ್ಯಾಹ್ನ 1.30ರ ಸಮಯದಲ್ಲಿ ಅಪಹರಿಸಿದ ಐವರು ಕಾಮುಕರು ಹತ್ತಿರದ ಕಾಡೊಂದಕ್ಕೆ ಒಯ್ದು ಅತ್ಯಾಚಾರ ಎಸಗಿ ರಸ್ತೆಯ ಮೇಲೆ ಬಿಸಾಕಿ ಹೋಗಿದ್ದಾರೆ. ಈ ಸಮಯದಲ್ಲಿ ಆಕೆಯ ಮೂವರು ಗೆಳತಿಯರು ಈ ಎಲ್ಲ ದೃಶ್ಯಗಳನ್ನುಕಣ್ತುಂಬಿಸಿಕೊಂಡು ಸಂಭ್ರಮಿಸಿದ್ದಾರೆ. ಈ ನಡುವೆ ಈ ಹೇಯ ಕೃತ್ಯದಿಂದ ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಆಕೆ ಕಷ್ಟಪಟ್ಟು ಮನೆಗೆ ಮರಳಿದ್ದಾಳೆ.

ಈ ಕುರಿತು ದೂರು ದಾಖಲಾಗಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment