ವಿವಾದಿತ ದೇವ ಮಹಿಳೆ ‘ ರಾಧೇ ಮಾ’ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ದೊರೆಯುತ್ತಿದ್ದು ಈ ನಡುವೆ ಬಿಗ್ ಬಾಸ್ ಬೆಡಗಿಯೊಬ್ಬಳು ರಾಧೇ ಮಾ ನಡೆಸುತ್ತಿದ್ದ ಸತ್ಸಂಗದಲ್ಲಿ ಅಪರಿಚಿತರ ಜತೆ ‘ಸೆಕ್ಸ್ ಸಂಗ’ ಮಾಡು ಎಂದು ತನ್ನನ್ನು ಒತ್ತಾಯಿಸಿದ್ದರು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಬಿಗ್ ಬಾಸ್ ಖ್ಯಾತಿಯ ಡೋಲಿ ಬಿಂದ್ರಾ ಇದೀಗ ‘ರಾಧೇ ಮಾ’ ಅವರ ಮತ್ತೊಂದು ರಹಸ್ಯವನ್ನು ಬಿಚ್ಚಿಟ್ಟಿದ್ದು ತಾನು ರಾಧೇ ಮಾ ಅವರ ಸತ್ಸಂಗದಲ್ಲಿ ಭಾಗವಹಿಸುತ್ತಿದ್ದೆ. ಈ ಸಮಯದಲ್ಲಿ ನನ್ನನ್ನು ಅಪರಿಚಿತನೊಂದಿಗೆ ಸೆಕ್ಸ್ ಮಾಡುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ನಾನು ರಾಧೇ ಮಾ ಅವರ ಅನುಯಾಯಿಯಾದ್ದೆ. ಆ ಸಮಯದಲ್ಲಿ ಅವರು ನನ್ನಲ್ಲಿ ಅಪರಿಚಿತನೊಂದಿಗೆ ಸೆಕ್ಸ್ ಮಾಡು ಎಂದು ಹೇಳಿದ್ದರು. ಅಲ್ಲದೇ ಸತ್ಸಂಗದಲ್ಲಿ ಇದೆಲ್ಲಾ ಮಾಮೂಲಿ ಎಂದು ತಿಳಿಸಿರುವ ಡೋಲಿ ಈ ಕುರಿತಾಗಿ ನಾನು 20 ಮಂದಿಯ ವಿರುದ್ಧ ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆ ಎಂಬುದನ್ನೂ ವಿವರಿಸಿದ್ದಾರೆ.