ರಾಷ್ಟ್ರೀಯ

ತಿಹಾರ್‌ ಜೈಲಲ್ಲಿ ನಿರ್ಭಯಾ ಅತ್ಯಾಚಾರಿಗೆ ಹಲ್ಲೆ

Pinterest LinkedIn Tumblr

nirbhayaಹೊಸದಿಲ್ಲಿ: ದೇಶದಲ್ಲೆಡೆ ಸಂಚಲನ ಸೃಷ್ಟಿಸಿದ್ದ ದಿಲ್ಲಿಯ ಬಸ್‌ನಲ್ಲಿ 2012ರಲ್ಲಿ ನಡೆದಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರದ ಆರೋಪಿ ವಿನಯ್‌ ಮೇಲೆ ಸಹಕೈದಿಗಳು ಹಲ್ಲೆ ನಡೆಸಿದ್ದಾರೆ.

ಹೊಸದಿಲ್ಲಿಯ ತಿಹಾರ್‌ ಜೈಲಿನಲ್ಲಿ ಬಿಗಿ ಭದ್ರತೆಯಡಿ ಶಿಕ್ಷೆ ಅನುಭವಿಸುತ್ತಿರುವ ಅತ್ಯಾಚಾರ ಪ್ರಕರಣದ ದೋಷಿಗಳಲ್ಲಿ ಒಬ್ಬನಾಗಿರುವ ವಿನಯ್‌ ಶರ್ಮ ಸಹ ಕೈದಿಗಳ ದಾಳಿಗೆ ತುತ್ತಾದವನು.

ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥರಾಗಿ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರು ಐವರ ಪೈಕಿ ವಿನಯ್‌ ಮೇಲೆ ಬುಧವಾರ ಹಲ್ಲೆ ನಡೆದಿದೆ ಎಂದು ಆತನ ಪರ ವಕೀಲರು ದಿಲ್ಲಿ ಹೈಕೋರ್ಟ್‌ಗೆ ದೂರು ಸಲ್ಲಿಸಿದ್ದು, ತನ್ನ ಕಕ್ಷಿದಾರನಿಗೆ ಇನ್ನೂ ಹೆಚ್ಚಿನ ಸುರಕ್ಷತೆ ಒದಗಿಸಲು ಕೋರಿದ್ಧಾರೆ ಎಂದು ತಿಳಿದು ಬಂದಿದೆ.

2012ರ ಡಿಸೆಂಬರ್‌ 16ರಂದು ರಾತ್ರಿ ಸುಮಾರು 10.30ಕ್ಕೆ ದಿಲ್ಲಿಯಲ್ಲಿ ತನ್ನ ಗೆಳೆಯನ ಜತೆ ಸಿನಿಮಾ ನೋಡಿ ಖಾಸಗಿ ಬಸ್‌ನಲ್ಲಿ ಮನೆಗೆ ಹಿಂತಿರುಗುತ್ತಿದ್ದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ನಿರ್ಭಯಾ ಮೇಲೆ ಒಬ್ಬ ಬಾಲಾಪರಾಧಿ ಸೇರಿದಂತೆ ಆರು ಮಂದಿ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಲ್ಲದೆ, ಆಕೆಗೆ ತೀವ್ರ ಹಿಂಸೆ ನೀಡಿ ಸಾಯುವ ಸ್ಥಿತಿಯಲ್ಲಿ ಬಸ್‌ನಿಂದ ಹೊರಗೆಸೆದಿದ್ದರು. ಆಕೆಯೊಂದಿಗೆ ಗೆಳೆಯನನ್ನೂ ಬಸ್‌ನಿಂದ ಎಸೆದಿದ್ದರು. ತೀವ್ರವಾಗಿ ಗಾಯಗೊಂಡಿದ್ದ ನಿರ್ಭಯಾ ಎರಡು ವಾರಗಳ ಕಾಲ ದಿಲ್ಲಿಯ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡಿದ್ದಳು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಹೋರಾಟ ಆಕೆಯನ್ನು ಸಿಂಗಾಪುರಕ್ಕೆ ಕಳುಹಿಸಿದರೂ ಅಲ್ಲಿನ ಆಸ್ಪತ್ರೆಯಲ್ಲಿ ಆಕೆ ಮೃತಪಟ್ಟಿದ್ದಳು.

Write A Comment