ಅಮೇಠಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಕಳೆದ ಬಾರಿಯ ಸ್ವಕ್ಷೇತ್ರ ಅಮೇಠಿ ಭೇಟಿ ಸುಲಭದ ಮಾತಾಗಿರಲಿಲ್ಲ. ರಾಹುಲ್ ಬಳಿ ಯಾವಾಗಲೂ ತಮ್ಮ ಸಮಸ್ಯೆ ಹೇಳಿಕೊಳ್ಳುವ ಮತದಾರರು ಕಳೆದ ಬಾರಿ ಕಾಂಗ್ರೆಸ್ ಉಪಾಧ್ಯಕ್ಷನ ಸಮಸ್ಯೆ ಆಲಿಸಲು ಮುಂದಾದರು.
”ಅಣ್ಣಾ ! ಎಲ್ಲಿಯವರೆಗೂ ನೀವು ಒಬ್ಬಂಟಿಯಾಗಿ ಅಮೇಠಿಗೆ ಬರುತ್ತೀರಾ? ಅತ್ತಿಗೆಯನ್ನು ನಿಮ್ಮ ಜೊತೆ ಯಾವಾಗ ಕರೆ ತರುತ್ತೀರಾ?.” ಎಂಬ ಪ್ರಶ್ನೆಯನ್ನು ಗ್ರಾಮಸ್ಥರು ಮುಂದಿಟ್ಟಾಗ ಒಂದು ಕ್ಷಣ ಏನು ಹೇಳಬೇಕೆಂದೇ ರಾಹುಲ್‌ಗೆ ತೋಚಲಿಲ್ಲ. ಇದಕ್ಕೆ ಯಾವುದೇ ಉತ್ತರ ನೀಡದ ಅವರು ನಕ್ಕು ಸುಮ್ಮನಾದರು ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.
45 ವರ್ಷದ ರಾಹುಲ್ ಗಾಂಧಿ ಗ್ರಾಮಸ್ಥರು ಕೇಳಿದ ಪ್ರಶ್ನೆಯಿಂದ ಕೆಲಕಾಲ ಮುಜುಗರಕ್ಕೀಡಾದರು. ಜನರ ಪ್ರಶ್ನೆಗೆ ಉತ್ತರಿಸಲು ರಾಹುಲ್ ಗಾಂಧಿಗೆ ಇನ್ನೂ ಕೆಲ ಸಮಯ ಬೇಕಾಗಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.