ನವದೆಹಲಿ: ಈ ವಿದ್ಯಾರ್ಥಿ ಬಳಿ ಇರುವುದು ಒಂದಲ್ಲ ಎರಡಲ್ಲ ಬರೋಬ್ಬರಿ 14 ಸಾವಿರ ಪೆನ್ಸಿಲ್. ದೆಹಲಿಯ ಶಾಲೆಯೊಂದರಲ್ಲಿ ಕಲಿಯುತ್ತಿರುವ ತುಷಾರ್ ಗಿನ್ನಿಸ್ ದಾಖಲೆ ಸೇರುವ ತವಕದಲ್ಲಿದ್ದಾರೆ.
ಉರುಗ್ವೆಯ ಎಮಿಲಿಯೋ ಎಂಬುವವರು 60 ದೇಶಗಳ 14,552 ಕಪ್ಪು ಪೆನ್ಸಿಲ್ ಸಂಗ್ರಹಿಸಿ ಗಿನ್ನಿಸ್ ದಾಖಲೆ ಸೇರಿದ್ದಾರೆ. ಅವರಿಗಿಂತ ಹೆಚ್ಚು ಅಂದರೆ 15,000 ಪೆನ್ಸಿಲ್ ಸಂಗ್ರಹಿಸಿ ಹೊಸ ದಾಖಲೆಯನ್ನು ನಿರ್ಮಿಸಬೇಕೆಂಬುದು ತುಷಾರ್ ನ ಅಭಿಲಾಷೆ.
3 ವರ್ಷದವನಿದ್ದಾಗಲೇ ಪೆನ್ಸಿಲ್ ಸಂಗ್ರಹಿಸುವ ಹವ್ಯಾಸ ಬೆಳೆಸಿಕೊಂಡ ತುಷಾರ್ ಆಸೆಗೆ ಸಂಬಂಧಿಕರು ಸ್ನೇಹಿತರು ಬೆಂಬಲ ನೀಡಿದ್ದಾರೆ. ಅಂಚೆಚೀಟಿ, ನಾಣ್ಯ, ನೋಟು ಸಂಗ್ರಹ ಮೊದಲಾದ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸಿಗಳನ್ನು ಕಂಡಿರುವ ತುಷಾರ್ ಗೆ ಅವರಿಗಿಂತ ಭಿನ್ನವಾಗಿ ಪೆನ್ಸಿಲ್ ಸಂಗ್ರಹಿಸಬೇಕೆಂಬ ತುಡಿತ ಉಂಟಾಯಿತು. ಅದಕ್ಕೆ ಅವರ ತಂದೆ ಕೂಡ ಬೆಂಬಲವಾಗಿ ನಿಂತು ತಮಗೆ ಕಂಡ ಹೊಸ ಮಾದರಿಯ ಪೆನ್ಸಿಲ್ ಗಳನ್ನು ತಂದು ಕೊಟ್ಟರು. ಈಗ ತುಷಾರ್ ಬಳಿ ವಿವಿಧ ನಮೂನೆಯ ಹದಿನಾಲ್ಕು ಸಾವಿರ ಪೆನ್ಸಿಲ್ ಗಳಿವೆ. ಈಗಾಗಲೇ ಲಿಮ್ಕಾ ದಾಖಲೆ ಸೇರಿರುವ ಆತನಿಗೆ ಗಿನ್ನೆಸ್ ದಾಖಲೆ ಸೇರಬೇಕೆಂಬ ಬಯಕೆ ಇದೆ. ಆತನ ಆಸೆ ಕೈಗೊಡಲಿ ಎಂದು ಹಾರೈಸೋಣಾ ಅಲ್ಲವೇ.