ರಾಷ್ಟ್ರೀಯ

‘ನೀಲಿ’ ಚಿತ್ರಪ್ರಿಯರಿಗೆ ಹೆದರಿತಾ ಮೋದಿ ಸರ್ಕಾರ …?

Pinterest LinkedIn Tumblr

pornಅಶ್ಲೀಲ ಅಂತರ್ಜಾಲ ತಾಣಗಳನ್ನು ಸ್ಥಗಿತಗೊಳಿಸುವ ಕೇಂದ್ರದ ನಿರ್ಧಾರದ ವಿರುದ್ಧ ದೇಶದಾದ್ಯಂತ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬೆದರಿದ ಮೋದಿ ಸರ್ಕಾರ ಮತ್ತೊಮ್ಮೆ ತನ್ನ ನಿರ್ಧಾರವನ್ನು ಪರಿಶೀಲನೆ ನಡೆಸಲು ಮುಂದಾಗಿದೆ.!

ಕಾಮಪ್ರಚೋದಕ ಚಿತ್ರದಿಂದ ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತದೆ ಎಂಬಕಾರಣಕ್ಕೆ ಒಟ್ಟು 857 ವೆಬ್‌ಸೈಟ್‌ಗಳನ್ನು ಸ್ಥಗಿತಗೊಳಿಸುವಂತೆ ದೂರವಾಣಿ ಇಲಾಖೆ, ಇಂಟರ್‌ನೆಟ್‌ ಸೇವಾ ಸಂಸ್ಥೆಗಳಿಗೆ (ಐಎಸ್‌ಪಿಎಸ್‌) ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ರಾತ್ರಿಯಿಂದಲೇ ಈ ಜಾಲತಾಣಗಳ ಸಂಪರ್ಕ ಕಡಿತಗೊಂಡಿತ್ತು. ಆದರೆ ಸರ್ಕಾರದ ಈ ಕ್ರಮದ ಬಗೆಗೆ ಸಾಮಾಜಿಕ ತಾಣಗಳಲ್ಲಿ ಸರ್ಕಾರದ ನಿರ್ಧಾರಕ್ಕೆ ಭಾರಿ ಟೀಕೆಗಳು ವ್ಯಕ್ತವಾಗಿತ್ತಲ್ಲದೇ  ಚಿತ್ರ ನಿರ್ದೇಶಕ ರಾಂ ಗೋಪಾಲ ವರ್ಮಾ, ಲೇಖಕ ಚೇತನ್‌ ಭಗತ್‌ ಸೇರಿದಂತೆ ಅನೇಕರು ಸರ್ಕಾರದ ಕ್ರಮವನ್ನು ವಿರೋಧಿಸಿದ್ದರು.

ಹಾಗಾಗಿ ಮಂಗಳವಾರ ಬೆಳಿಗ್ಗೆ ರವಿ ಶಂಕರ್‌ ಪ್ರಸಾದ್‌ ಐ.ಟಿ ಕಾರ್ಯದರ್ಶಿ ಆರ್‌.ಎಸ್‌ ಶರ್ಮಾ ಮತ್ತು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪಿಂಕಿ ಆನಂದ್‌ ಜತೆ ಚರ್ಚೆ ನಡೆಸಿ 857 ವೆಬ್‌ಸೈಟ್‌ಗಳಲ್ಲಿ ಎಲ್ಲವೂ ಕಾಮ ಪ್ರಚೋದಕ ವಿಷಯಗಳನ್ನು ಪ್ರಕಟಿಸುತ್ತಿಲ್ಲ. ಕೆಲವು ವೆಬ್‌ಸೈಟ್‌ಗಳು ಜೋಕ್ಸ್‌ಗಳು ಮತ್ತು ಹಾಸ್ಯಕ್ಕೆ ಸೀಮಿತವಾಗಿವೆ. ಇಂತಹ ವೆಬ್‌ಸೈಟ್‌ ಮೇಲಿನ ನಿಷೇಧವನ್ನು ತೆಗೆದುಹಾಕಲಾಗಿದೆ. ಇನ್ನುಳಿದ ವೆಬ್‌ಸೈಟ್‌ಗಳ ಕಂಟೆಂಟ್‌ ಪರಿಶೀಲಿಸಿದ ನಂತರ, ನಿಷೇಧದ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

Write A Comment