ರಾಷ್ಟ್ರೀಯ

ಕಲಾಂ ನಿಧನದ ಶೋಕದಲ್ಲಿರುವಾಗ ಡ್ಯಾನ್ಸ್ ಮಾಡಿದ ಮುಖ್ಯಮಂತ್ರಿ !

Pinterest LinkedIn Tumblr

asaತಮಿಳುನಾಡಿನ ರಾಮೇಶ್ವರಂ ಪೆಯಿಕರುಂಬು ಮೈದಾನದಲ್ಲಿ ಭಾರತರತ್ನ ಡಾ.ಎ. ಪಿ.ಜೆ.ಅಬ್ದುಲ್ ಕಲಾಂ ಅವರ ನಿಧನದಿಂದ ದೇಶದ ಜನರು ಶೋಕಸಾಗರದಲ್ಲಿ ಮುಳುಗಿದ್ದರೆ ಆಸ್ಸಾಂ ಮುಖ್ಯಮಂತ್ರಿ ತರುಣ್ ಗೋಗಾಯ್ ಅವರು ಡಾನ್ಸ್ ಮಾಡುವ ಮೂಲಕ ವಿವಾದದಕ್ಕೆ ಕಾರಣರಾಗಿದ್ದಾರೆ.

ಹೌದು. ಭಾರತದ ಹೆಮ್ಮೆಯ ಪುತ್ರ ಕಲಾಂ ಅವರ ನಿಧನ ಹಿನ್ನೆಲೆಯಲ್ಲಿ ದೇಶ ವ್ಯಾಪಿ ಯಾವುದೇ ಸರ್ಕಾರಿ ಕಾರ್ಯಕ್ರಮದ ಸಂಭ್ರಮಚಾರಿಸದೇ ಶೋಕಾಚರಣೆ ಮಾಡುವಂತೆ ಕೇಂದ್ರ ಸರ್ಕಾರ ಆದೇಶಿಸಿತ್ತು. ಆದರೆ ಇದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ  ಗೋಗಾಯ್ ಟೀ ಎಸ್ಟೇಟ್ ನಲ್ಲಿ ಇಬ್ಬರು ಪರಿಶಿಷ್ಟ ಸಮುದಾಯದ ಯುವತಿಯರೊಂದಿಗೆ ಡ್ಯಾನ್ಸ್ ಮಾಡುತ್ತಿದ್ದರು ಎನ್ನಲಾಗಿದೆ. ಈ ಕುರಿತು ಕೆಲ ದೃಶ್ಯ  ಮಾಧ್ಯಮಗಳು ಬೆಳಕು ಚೆಲ್ಲಿದ್ದವು . ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಕುರಿತು ಚರ್ಚೆ ಆರಂಭವಾಗಿದ್ದವು.

ತಮ್ಮ ನಡೆ ವಿವಾದಕ್ಕೆ ಕಾರನವಾಗುತ್ತಿದ್ದಂತೆ ಜನರ ಕ್ಷಮೆಯಾಚಿಸಿದ ಗೋಗಾಯ್ ನಾನು ಒಂದು ಕ್ಷಣ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ನಿಧನರಾಗಿದ್ದ ವಿಚಾರವನ್ನು ಮರೆತಿದ್ದು ಈ ಡಾನ್ಸ್ ನಲ್ಲಿ ಭಾಗವಹಿಸಿದ್ದೆ ಇದಕ್ಕಾಗಿ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ಧಾರೆ.

Write A Comment