ಕೆಲವು ರಾಜಕಾರಣಿಗಳು ಗಡಿಬಿಡಿಯಲ್ಲಿ ಮಾಡುವ ಅವಾಂತರ ಒಂದೆರಡಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಛತ್ತೀಸ್‌ಗಡ್ ಮುಖ್ಯಮಂತ್ರಿ ರಮಣ್ ಸಿಂಗ್ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂಗೆ ಸಂತಾಪ ಸೂಚಿಸುವ ಬದಲು ಪ್ರಧಾನಿ ಮೋದಿಗೆ ಸಂತಾಪ ಸೂಚಿಸಿ ವಿವಾದದ ಕಿಡಿ ಹಚ್ಚಿದ್ದಾರೆ.
ಹೌದು. ಡಾ.ಕಲಾಂ ಅವರಿಗೆ ಸಂತಾಪ ಸೂಚಿಸುವ ಭರದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಸಾವಿಗೆ ಸಂತಾಪ ಸೂಚಿಸುವುದಾಗಿ ಹೇಳಿದ್ದು ವಿಡಿಯೋಗಳಲ್ಲಿ ಹರಿದಾಡುತ್ತಿದ್ದು ರಾಮನ್ ಸಿಂಗ್ ಅವರ ಕುರಿತಾಗಿ ಆಕ್ರೋಶದ ಕಾಮೆಂಟ್ ಗಳೂ ಸಹ ಹರಿದಾಡುತ್ತಿವೆ.
ಅಲ್ಲದೇ ಒಬ್ಬ ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿ ಅದರಲ್ಲಿಯೂ ಬಿಜೆಪಿ ಮುಖಂಡರೇ ಆಗಿರುವ ರಮಣ್ ಸಿಂಗ್ ದೇಶದ ಪ್ರಧಾನಿಯವರ ಕುರಿತಾಗಿ ಈ ರೀತಿಯಾಗಿ ಸಂತಾಪ ಸೂಚಿಸಿರುವುದು ಸ್ವಪಕ್ಷೀಯರಿಗೂ ಇರಿಸುಮುರುಸನ್ನುಂಟು ಮಾಡಿದೆ. ಅಬ್ದುಲ್ ಕಲಾಂ ನಮ್ಮ ನಡುವೆ ಇದ್ದಾಗಲೇ ಜಾರ್ಖಂಡ್ ರಾಜ್ಯದ ಶಿಕ್ಷಣ ಸಚಿವೆ ನೀರಾ ಯಾದವ್ ಫೋಟೋಕ್ಕೆ ಹಾರ ಹಾಕಿ ವ್ಯಾಪಕ ಟೀಕೆಗೆ ಗುರಿಯಾಗಿದ್ದನ್ನಿಲ್ಲಿ ಸ್ಮರಿಸಬಹುದು.